ವರ್ಲ್ಡ್ ಕಪ್ ಬಳಿಕ ಕ್ರೀಡಾಭಿಮಾನಿಗಳು ಪ್ರೋ ಕಬಡ್ಡಿ ಲೀಗ್ ಗಾಗಿ ಕಾಯುತ್ತಿದ್ದಾರೆ. ಮುಂದಿನ ತಿಂಗಳು, ಅಂದ್ರೆ ಡಿಸೆಂಬರ್ 2ಕ್ಕೆ ಪ್ರೋ ಕಬಡ್ಡಿ ಲೀಗ್ ಶುರುವಾಗಲಿದೆ.
ಈ ನಡುವೆ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿರುವ ಸ್ಯಾಂಡಲ್ವುಡ್ ಬಾದ್ ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಪ್ರೋ ಕಬಡ್ಡಿ ಲೀಗ್ ನ ಜಾಹಿರಾತಿನ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಿಚ್ಚ ಸುದೀಪ್ ಹೊಳೆಯುತ್ತಿರುವ ಬೆಳಗಿನ ಸೂರ್ಯ ರಶ್ಮಿಯ ಬೇಳಕಲ್ಲಿ ಬೆಳ್ಳನೆ ಕುದುರೆಯೇರಿ ರೋಶಾವೇಶದಿಂದ ಬರುತ್ತಾರೆ.
ಈ ಜಾಹಿರಾತನ್ನು ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಶೂಟ್ ಮಾಡಲಾಗಿದೆ. ಈ ವಿಡಿಯೋದ ಆರಂಭದಲ್ಲಿ ಕಿಚ್ಚ ಯಾವುದೋ ಯುದ್ಧಕ್ಕೆ ಹೋಗುತ್ತಿರುವ ಖದರ್ ನಲ್ಲಿ ಬಿಳಿ ಬಣ್ಣದ ಕುದುರೆಯೇರಿ ರಾಜನಂತೆ ಬರುತ್ತಾರೆ. ನಟ ಬಾಲಯ್ಯ ಕೂಡ ಎದುರಿನಿಂದ ಮತ್ತೊಂದು ಕುದುರೆಯೇರಿ ಬರುತ್ತಾರೆ. ಇವರಿಬ್ಬರೂ ಮುಖಾಮುಖಿಯಾಗಿ ಜಗಜ್ಜೆಟ್ಟಿಗಳಂತೆ ಕಾದಾಡುವಾಗ ಕಬಡ್ಡಿ ನಮ್ದು ಎನ್ನುವ ಸಾಲು ಬರುತ್ತದೆ.
ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಬೆಂಗಳೂರು ಬುಲ್ಸ್ ತಂಡದ ರಾಯಭಾರಿ ಕಿಚ್ಚ ಸುದೀಪ್, ಬರ್ಕಯ್ಯ. ಪೇಪರ್ ಮುಂದಾಗಡೆ ಬರ್ಕೋ. ಕಬಡ್ಡಿ ನಮ್ದು. ನೋಡಿರಿ ಪ್ರೋ ಕಬಡ್ಡಿ ಲೀಗ್ ಡಿಸೆಂಬರ್ 2 ರಾತ್ರಿ 8 ರಿಂದ ನಿಮ್ಮ ಸ್ಟಾರ್ ಸ್ಪೋರ್ಟ್ಸ್ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಎಂದು ಬರೆದುಕೊಂಡಿದ್ದಾರೆ.





