Mysore
28
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬೇರೆ ತಂಡಗಳ ಪರ ಕಣಕ್ಕಿಳಿದ ಭಾರತೀಯರು ಯಾರ್ಯಾರು ಗೊತ್ತಾ?

ಭಾರತದ ಮೂಲ ಆಟಗಾರರು ವಿವಿಧ ಅಂತರರಾಷ್ಟ್ರೀಯ ತಂಡಗಳನ್ನು ಪ್ರತಿನಿಧಿಸಿರುವ ಹಲವಾರು ಉದಾಹರಣೆಗಳನ್ನು ನಮ್ಮ ಕಣ್ಣಮುಂದಿದೆ. ಇದೇ ರೀತಿ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಮೂಲಕ ಆಟಗಾರರು ಬೇರೆ ಬೇರ ತಂಡಗಳನ್ನು ಪ್ರತಿನಿಧಿಸಿದ್ದು, ಅವರಲ್ಲಿ ಕೇಶವ್‌ ಮಹಾರಜ್‌, ರಚಿನ್‌ ರವೀಂದ್ರ ಹಾಗೂ ತೇಜಾ ನಿದಮನುರು ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸಿದ ಆಟಗಾರರಗಿದ್ದಾರೆ. ಈ ಮೂವರು ಆಟಗಾರರು ಈ ಟೂರ್ನಿಯಲ್ಲಿ ಎಷ್ಟು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ ಹಾಗೂ ಅವರ ಅಂಕಿ ಅಂಶ ಈ ಕೆಳಕಂಡಂತಿದೆ

ಹೆಸರು: ರಚಿನ್‌ ರವೀಂದ್ರ

ಜನನ: ನವೆಂಬರ್‌ 18,1999 (24 ವರ್ಷ)

ಸ್ಥಳ: ವೆಲ್ಲಿಂಗ್ಟನ್‌, ನ್ಯೂಜಿಲೆಂಡ್‌

ಪಾತ್ರ: ಬ್ಯಾಟಿಂಗ್‌ ಆಲ್‌ರೌಂಡರ್‌

ಬೆಂಗಳೂರು ಮೂಲದ ಉದ್ಯಮಿಗಳ ಮಗನಾದ ರಚಿನ್‌ ರವೀಂದ್ರ, ಈ ಬಾರಿಯ ವಿಶ್ವಕಪ್‌ನಲ್ಲಿ ತಮ್ಮೇ ಛಾಪು ಮೂಡಿಸುವ ಮೂಲಕ ವಿಶ್ವ ಕ್ರಿಕೆಟ್‌ನ ಗಮನ ಸೆಳೆಯುವಲ್ಲಿ ಸಫಲರಾಗಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ಕಡಿಮೆ ವಯಸ್ಸಿನ ಆಟಗಾರನೊಬ್ಬ ಶತಕ ಸಿಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅತಿ ಕಿರಿಯ ಬ್ಯಾಟರ್‌ ಒಬ್ಬರು ವಿಶ್ವಕಪ್‌ನಲ್ಲಿ ಶತಕ ಸಿಡಿಸಿದ ದಾಖಲೆಯು ಈ ಹಿಂದೆ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ಗೆಸರಿನಲ್ಲಿತ್ತು. ಈ ದಾಖಲೆಯನ್ನು ಮುರಿಯುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಹೆಗ್ಗಳಿಕೆಗೆ ಉದಯೋನ್ಮುಕ ಆಟಗಾರ  ರಚಿನ್‌ ರವೀಂದ್ರ ಪಾತ್ರರಾಗಿದ್ದಾರೆ.

ಐಸಿಸಿ ವಿಶ್ವಕಪ್‌ 2023ರಲ್ಲಿ 10 ಪಂದ್ಯಗಳನ್ನು ಆಡಿದ್ದು, ಬರೋಬ್ಬರಿ 578ರನ್‌ಗಳನ್ನು ಕಲೆಹಾಕಿದ್ದಾರೆ. ಇವುಗಳಲ್ಲಿ ಭರ್ಜರಿ 3 ಶತಕಗಳು ದಾಖಲಾಗಿವೆ. ಪದಾರ್ಪಣಾ ವಿಶ್ವಕಪ್‌ ಟೂರ್ನಿಯಲ್ಲಿ 3 ಶತಕ ದಾಖಲಿಸಿದ ಹೆಗ್ಗಳಿಕೆಯೂ ರಚಿನ್‌ರ ಪಾಲಾಗಿದೆ.

ಬ್ಯಾಟಿಂಗ್‌ ಅಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿಯೂ ಕಮಾಲ್‌ ಮಾಡಿದ ಈ ಆಟಗಾರ 5 ಪ್ರಮುಖ ವಿಕೆಟ್‌ ಪಡೆಯುವಲ್ಲಿಯೂ ಸಫಲರಾಗಿದ್ದಾರೆ.

ಹೆಸರು: ಕೇಶವ್‌ ಆತ್ಮಾನಂದ ಮಹಾರಾಜ್‌

ಜನನ; ಫೇಬ್ರವರಿ 7,1990 (33 ವರ್ಷ)

ಸ್ಥಳ: ಡರ್ಬನ್‌, ದ. ಆಫ್ರಿಕಾ

ಬೌಲಿಂಗ್‌: ಎಡಗೈ ಸ್ಪಿನ್‌ ಬೌಲರ್‌

ಭಾರತೀಯ ಮೂಲದ ಎಡಗೈ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಇದುವರೆಗೆ 41 ಏಕದಿನ, 26 ಟಿ20 ಮತ್ತು 49 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ.

ವಿಶ್ವಕಪ್‌ನಲ್ಲಿ 10 ಪಂದ್ಯಗಳಲ್ಲಿ 15 ವಿಕೆಟ್‌ ಪಡೆದು ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಸೆಮಿಸ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ದ ಸೋತು ಚೋಕರ್ಸ್‌ ಪಟ್ಟವನ್ನು ತನನ್ನಲ್ಲಿಯೇ ಉಳಿಸಿಕೊಂಡಿದೆ.

ಹೆಸರು: ತೇಜ ನಿದಮನೂರು

ಜನನ: ಆಗಸ್ಟ್‌ 22, 1994

ಸ್ಥಳ: ವಿಜಯವಾಡ, ಆಂಧ್ರಪ್ರದೇಶ್‌

ಆಂಧ್ರ ಮೂಲದ ಬಲಗೈ ದಾಂಡಿಗ ತೇಜ ಅವರು, ನೆದರ್‌ಲೆಂಡ್ಸ್‌ಪರ 27 ಏಕದಿನ ಹಾಗೂ 6 ಟಿ20 ಪಂದ್ಯಗಳಲ್ಲಿ ಆಡಿದ್ದು, ವಿಶ್ವಕಪ್‌ನಲ್ಲಿ ಒಟ್ಟು 10 ಪಂದ್ಯಗಳಿಂದ ಒಂದು ಅರ್ಧ ಶತಕ ಸಹಿತ 174ರನ್‌ ಬಾರಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ