Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಿಶ್ವಕಪ್‌ ಎಫೆಕ್ಟ್‌: ಯೂನಿಟ್‌ ಟೆಸ್ಟ್‌ ಮುಂದೂಡಿದ ಶಾಲೆ; ಪತ್ರ ವೈರಲ್‌

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಇಂದು ( ನವೆಂಬರ್‌ 19 ) ಅಹ್ಮದಾಬಾದ್‌ನ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವಿಶ್ವಕಪ್‌ ಫೈನಲ್‌ ಪಂದ್ಯ ನಡೆಯಲಿದ್ದು, ಟೀಮ್‌ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಟ್ರೋಫಿಗಾಗಿ ಅಂತಿಮ ಸೆಣಸಾಟ ನಡೆಸಲಿವೆ.

ಮೈದಾನದಲ್ಲಿ ಇತ್ತಂಡಗಳ ಆಟಗಾರರು ಕಣಕ್ಕಿಳಿದು ಗೆಲುವಿಗಾಗಿ ಹೇಗೆಲ್ಲಾ ಪ್ರದರ್ಶನಗಳನ್ನು ನೀಡಬೇಕೆಂಬ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದರೆ, ಟಿಕೆಟ್‌ ಖರೀದಿಸಿರುವ 132000 ಕ್ರಿಕೆಟ್‌ ಪ್ರೇಮಿಗಳು ಪಂದ್ಯ ವೀಕ್ಷಿಸಲು ಇಂದು ಮುಂಜಾನೆಯಿಂದಲೇ ಮೈದಾನದ ಮುಂದೆ ಜಮಾಯಿಸಿದ್ದಾರೆ. ಇನ್ನು ಕೋಟ್ಯಂತರ ಕ್ರಿಕೆಟ್‌ ಪ್ರಿಯರು ಮನೆಯಲ್ಲಿ ಟಿವಿ ಮುಂದೆ ಕುಳಿತು ಪಂದ್ಯವನ್ನು ಆನಂದಿಸಲು ಹಾಗೂ ಟೀಮ್‌ ಇಂಡಿಯಾಗೆ ಬೆಂಬಲಿಸಲು ಸಜ್ಜಾಗಿದ್ದಾರೆ.

ಇಂದು ಭಾನುವಾರವಿರುವ ಕಾರಣ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಇದ್ದು ಪಂದ್ಯದ ವೀಕ್ಷಕರ ಸಂಖ್ಯೆ ದೊಡ್ಡ ಮಟ್ಟದಲ್ಲಿರಲಿದೆ. ಇನ್ನು ಭಾರತದಲ್ಲಿ ಕ್ರಿಕೆಟ್‌ ಕ್ರೇಜ್‌ ಎಷ್ಟರ ಮಟ್ಟಿಗೆ ಇರಬೇಕೆಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಲ್ಲೊಂದು ಶಾಲೆ ವಿಶ್ವಕಪ್‌ ಸಲುವಾಗಿ ಯೂನಿಟ್‌ ಟೆಸ್ಟ್‌ ಅನ್ನು ಮುಂದೂಡುವ ಮೂಲಕ ಕ್ರಿಕೆಟ್‌ ಕ್ರೇಜ್‌ಗೆ ಕೈಗನ್ನಡಿ ಹಿಡಿದಿದೆ.

ಹೌದು, ಫರಿದಾಬಾದ್‌ನ ಡಿಎವಿ ಪಬ್ಲಿಕ್‌ ಶಾಲೆ ನಾಳೆ ನವೆಂಬರ್‌ 20ರ ಸೋಮವಾರ ಇದ್ದ ಆರನೇ ತರಗತಿಯಿಂದ 12ನೇ ತರಗತಿವರೆಗಿನ ಯೂನಿಟ್‌ ಟೆಸ್ಟ ಅನ್ನು ಮಂಗಳವಾರಕ್ಕೆ ಮುಂದೂಡಿ ಪತ್ರವೊಂದನ್ನು ಹಂಚಿಕೊಂಡಿದೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಭಾರತದಲ್ಲಿ ಕ್ರಿಕೆಟ್‌ ಒಂದು ರಿಲಿಜಿಯನ್‌ ಇದ್ದಂತೆ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ.

ವಿಶ್ವಕಪ್‌ ಫೈನಲ್‌ ಪಂದ್ಯ ಇರುವ ಕಾರಣ ಮಕ್ಕಳು ಕ್ರಿಕೆಟ್‌ ವೀಕ್ಷಿಸಲಿದ್ದು ಯೂನಿಟ್‌ ಟೆಸ್ಟ್‌ ಅನ್ನು ಮುಂದೂಡಿದ್ದೇವೆ ಎಂದು ಬರೆದುಕೊಂಡಿರುವ ಈ ಸಂಸ್ಥೆ ಈ ಪಂದ್ಯವನ್ನು ಎಲ್ಲಾ ವಯಸ್ಸಿನವರೂ ಕುಟುಂಬ ಸಮೇತರಾಗಿ ಕುಳಿತು ವೀಕ್ಷಿಸುವುದರಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ, ಭಾರತ ಟ್ರೋಫಿಯನ್ನು ಗೆದ್ದು ಬರಲಿ ಎಂದು ಆಶಿಸುತ್ತೇವೆ ಎಂದು ಉಲ್ಲೇಖಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ