ಕೆಲ ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸಂಚಲನ ಮೂಡಿಸಿತ್ತು. ಕೊಡಗಿನ ಬೆಡಗಿಯ ಬಳಿಕ,ಇದೀಗ ಬಿ ಟೌನ್ ನಟಿ ಕಾಜೋಲ್ ಅವರ ಡೀಪ್ ಫೇಕ್ ವಿಡಿಯೋವನ್ನು ವೈರಲ್ ಮಾಡಲಾಗಿದೆ.
ಯುವತ್ತಿಯೊಬ್ಬರು ಬಟ್ಟೆ ಬದಲಿಸುತ್ತಿರುವ ವಿಡಿಯೋವೊಂದಕ್ಕೆ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಬಿ ಟೌನ್ ನ ಕೃಷ್ಣ ಸುಂದರಿ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.
ಅಸಲಿಗೆ ಈ ವಿಡಿಯೋವನ್ನು ಜೂನ್ 5 ರಂದು ಟಿಕ್ ಟಾಕ್ ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬರು, ಗೆಟ್ ರೆಡಿ ವಿತ್ ಮಿ ಟ್ರೆಂಡ್ ಅಡಿಯಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ವಿಡಿಯೋದಲ್ಲಿರುವ ಯುವತಿಯ ಮುಖಕ್ಕೆ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಲಾಗಿದೆ ಎಂದು ಪ್ಯಾಕ್ಟ್ ಚೆಕ್ ಮಾಡುವ ಬೂಮ್ ವರದಿ ಮಾಡಿದೆ.