ಮುಂಬೈ : ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ವರ್ಲ್ಡ್ ಕಪ್ ಸೆಮಿ ಫ್ಯನಲ್ ಪಂದ್ಯದಲ್ಲಿ ಭಾರತ ನಾಯಕ ಹಿಟ್ ಮ್ಯಾನ್ ಮತ್ತೆರೆಡು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ಕಳೆದ ಪಂದ್ಯದಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸುವ ಮೂಲಕ ಹಿಂದಿನ ಎಬಿಡಿ ದಾಖಲೆಯನ್ನು ಸರಿಗಟ್ಟಿದ್ದ ರೋಹಿತ್ ಇದೀಗ ಮತ್ತೆರದು ದಾಖಲೆ ಬರೆಯುವ ಮೂಲಕ ವರ್ಲ್ಡ್ ಕಪ್‌ನಲ್ಲಿ ಮೂರು ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಉತ್ತಮ ಆರಂಭ ಪಡೆಯಿತು. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರುತ್ತಾ ಬಂದಿರುವ ನಾಯಕ ರೋಹಿತ್ ಕೀವಿಸ್ ವಿರುದ್ಧ ಕೇವಲ 29 ಎಸೆತಗಲಲ್ಲಿ 47ರನ್ ಸಿಡಿಸಿ ಗಮನ ಸೆಳೆದರು. ತಮ್ಮ ಇನ್ನಿಂಗ್ಸ್‌ನಲ್ಲಿ ಅಮೋಘ ಮೂರು ಸಿಕ್ಸರ್ ಹೊಡೆಉವ ಮೂಲಕ ಮತ್ತೆರೆಡು ದಾಖಲೆ ಬರೆದರು.
ಹಿಟ್ ಮ್ಯಾನ್ ದಾಖಲೆ:
ವರ್ಲ್ಡ್ ಕಪ್ ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್(49) ಸಿಡಿಸಿ ದಾಖಲೆ ಬರೆದಿದ್ದ ಕ್ರಿಸ್ ಗೇಲ್ ದಾಖಲೆಯನ್ನು ರೋಹಿತ್ ಮುರಿದಿದ್ದಾರೆ. ತಾವಾಡಿದ 27 ಇನ್ನಿಂಗ್ಸ್‌ನಲ್ಲಿ 50 ಸಿಕ್ಸರ್ ಬಾರಿಸಿ ಈ ದಾಖಲೆ ಮಾಡಿದರು. ಜೊತೆಗೆ ಪ್ರಸಕ್ತ ವಿಶ್ವಕಪ್ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ದಾಖಲಿಸಿದ ಹಿರಿಮೆ ಅವರಿಗಾಗಿದೆ.
ಏಕದಿನ ವಿಶ್ವಕಪ್’ನಲ್ಲಿ ಅತಿ ಹೆಚ್ಚು ಸಿಕ್ಸರ್
50 – ರೋಹಿತ್ ಶರ್ಮಾ*
49 – ಕ್ರಿಸ್ ಗೇಲ್
43 – ಗ್ಲೆನ್ ಮ್ಯಾಕ್ಸ್‌ವೆಲ್
37 – ಎಬಿ ಡಿವಿಲಿಯರ್ಸ್
37 – ಡೇವಿಡ್ ವಾರ್ನರ್
ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್
27 – ರೋಹಿತ್ ಶರ್ಮಾ (2023)*
26 – ಕ್ರಿಸ್ ಗೇಲ್ (2015)
22 – ಇಯಾನ್ ಮಾರ್ಗನ್ (2019)
22 – ಗ್ಲೆನ್ ಮ್ಯಾಕ್ಸ್‌ವೆಲ್ (2023)*
21 – ಎಬಿ ಡಿವಿಲಿಯರ್ಸ್ (2015)
21 – ಕ್ವಿಂಟನ್ ಡಿ ಕಾಕ್ (2023)*
ಇದನ್ನೂ ಓದಿ: ಸೌರವ್ ಗಂಗೂಲಿ ಅಧಿಕಾರ ಕಳೆದುಕೊಳ್ಳಲು ಕಾರಣ ಜೈ ಶಾ ಮಾಡಿದ ಕುತಂತ್ರ! ಸ್ಟಾರ್ ಕ್ರಿಕೆಟಿಗನ ಹೇಳಿಕೆ





