Mysore
23
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಮಧ್ಯಪ್ರದೇಶ ದೇಶದ ಭ್ರಷ್ಟಚಾರದ ರಾಜಧಾನಿ : ರಾಹುಲ್‌ ಗಾಂಧಿ ಟೀಕೆ

ಭೋಪಾಲ್‌ : ಮಧ್ಯಪ್ರದೇಶ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದ್ದು, ಅಲ್ಲಿನ ಬಿಜೆಪಿ ಸರ್ಕಾರ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ರಾಜ್ಯದ ನಿಮಚ್‌ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರ ಪುತ್ರ ಹಾಗೂ ಮಧ್ಯವರ್ತಿ ಹಲವು ಕೋಟಿ ರೂಪಾಯಿಗಳ ಕುರಿತು ಮಾತನಾಡುತ್ತಿರುವ ವೈರಲ್‌ ವೀಡಿಯೋ ಉಲ್ಲೇಖಿಸಿ, ಅವರು ನಿಮ್ಮ ಹಣವನ್ನು ಲೂಟಿಗೈಯುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

ಜತೆಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೇ ಜಾತಿ ಗಣತಿ ನಡೆಸಲಾಗುವುದು ಎಂದು ಭರವಸೆಯನ್ನು ರಾಗಾ ನೀಡಿದರು.

ಪಕ್ಷ ಅಧಿಕಾರಕ್ಕೆ ಬಂದರೆ 500 ರೂ.ಗೆ ಎಲ್ಪಿಜಿ ಸಿಲಿಂಡರ್, 2 ಲಕ್ಷ ರೂ. ವರೆಗೆ ರೈತರ ಸಾಲ ಮನ್ನಾ, ಗೋಧಿಗೆ 2,600 ರೂ.ನಿಂದ 3,000 ರೂ. ವರೆಗೆ ಬೆಂಬಲ ಬೆಲೆ, 100 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಸಾಲದ ಕಾರಣಕ್ಕಾಗಿ 18,000 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರು ಪ್ರತಿಪಾದಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸಾಲ ಮನ್ನಾ ಪ್ರಾರಂಭಿಸಿದಾಗ, ತಮ್ಮ ಸರಕಾರವನ್ನು ಬಿಜೆಪಿ ಅಪಹರಿಸಿತು ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ರೂಪಿಸಿತು. ಅದೇ ಕ್ಷಣದಿಂದ 27 ಲಕ್ಷ ಕೃಷಿಕರ ಸಾಲ ಮನ್ನಾ ಮಾಡುವ ಮೂಲಕ ರೈತರಿಗಾಗಿ ಕೆಲಸ ಮಾಡಲು ಆರಂಭಿಸಿತು. ಬಿಜೆಪಿ ದೊಡ್ಡ ಕೈಗಾರಿಕೋದ್ಯಮಿಗಳೊಂದಿಗೆ ಶಾಮೀಲಾಗಿ ರೈತರ, ಕಾರ್ಮಿಕರ ಹಾಗೂ ಅಂಗಡಿ ಮಾಲಿಕರ ಸರಕಾರವನ್ನು ಅಪಹರಿಸಿತು ಹಾಗೂ ಅಧಿಕಾರಕ್ಕೆ ಬಂತು ಎಂದು ರಾಹುಲ್ ಗಾಂಧಿ ಹೇಳಿದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ