Mysore
26
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಉಗ್ರ ಮೌಲಾನಾ ರಹೀಮ್‌ ಉಲ್ಲಾ ತಾರೀಖ್‌ ಹತ್ಯೆ

ಇಸ್ಲಾಮಾಬಾದ್‌ : ಪಾಕಿಸ್ತಾನ ಮೂಲದ ಲಷ್ಕರ್‌ ತೋಯ್ಬಾ ಸಂಘಟನೆಯ ಹಿರಿಯ ಕಮಾಂಡರ್‌ ಅಕ್ರಂ ಖಾನ್‌ ಘಾಜಿ ಕೊಲೆ ಹಿನ್ನಲೆಯಲ್ಲೇ ಮತ್ತೊಬ್ಬ ಉಗ್ರನ ಹತ್ಯೆ ನಡೆದಿದೆ. ಜೈಶ್‌ ಎ ಮೊಹಮ್ಮದ್‌ ಸಂಘಟನೆಯ ಉಗ್ರ ಹಾಗೂ ಮೌಲಾನ್‌ ಮಸೂದ್‌ ಅಕರ್‌ನ ಆಪ್ತ ಸ್ನೇಹಿತ ಮೌಲಾನಾ ರಹೀಮ್‌ ಉಲ್ಲಾ ತಾರೀಖ್‌ನನ್ನು ಹತ್ತಿಕ್ಕಿ ಕೊಂದಿದ್ದಾರೆ.

ಕರಾಚಿಯಲ್ಲಿ ಭಾರತ ವಿರೋಧಿ ಸಮಾವೇಷದಲ್ಲಿ ಭಾಷಣ ಮಾಡಲು ತೆರಳುತ್ತಿದ್ದಾಗ ಕರಾಚಿಯ ಓರಂಗಿ ಪಟ್ಟಣ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.

ರಹೀಮ್‌ ಉಲ್ಲಾ ತಾರೀಖ್‌ ಓರ್ವ ಮೌಲಾನಾಗಿದ್ದು, ತನ್ನ ಭಾಷಣಗಳನ್ನು ಸಾವಿರಾರು ಜನರು ಸೇರುವ ಧಾರ್ಮಿಕ ಸಮಾವೇಶಗಳಲ್ಲಿ ಭಾರತ ವಿರೋಧಿ ಭಾಷಣ ಮಾಡುತ್ತಿದ್ದನು. ಜತೆಗೆ ಲಷ್ಕರ್‌ ಸಂಘಟನೆಗೆ ಯುವಕರನ್ನು ಪ್ರಚೋದಿಸುವುದು, ನೇಮಕ ಮಾಡುವ ಹೊಣೆಗಾರಿಕೆಯನ್ನು ನೋಡಿಕೊಳ್ಳುತ್ತಿದ್ದನು. ಭಾರತದ ಕಾಶ್ಮೀರಿ ಕಣಿವೆಯಲ್ಲಿ ಉಗ್ರರ ದಾಳಿಯಲ್ಲಿ ಈತನ ಪಾಲು ಇತ್ತು.

ಇಂದು ಅಪರಿವಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿ ಕೊಂದಿದ್ದು, ಈ ಹತ್ಯೆಗಳ ಹಿನ್ನಲೆ ನಿಗೂಢವಾಗಿಯೇ ಉಳಿದಿದೆ. ಮತ್ತು ಈ ದಾಳಿಗಳ ಬಗ್ಗೆ ಇದುವರೆಗೂ ಯಾವುದೇ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲದೇ ಇರುವುದು ಹಲವು ಕೌತುಕಗಳಿಗೆ ದಾರಿ ಮಾಡಿಕೊಟ್ಟಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ