Mysore
31
scattered clouds

Social Media

ಶನಿವಾರ, 04 ಏಪ್ರಿಲ 2026
Light
Dark

ಒಟಿಟಿಯಲ್ಲಿ ಬಿಡುಗಡೆಗೆ ಸಜ್ಜಾದ ಘೋಸ್ಟ್‌

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ನಟನೆಯ ಘೋಸ್ಟ್‌ ಸಿನಿಮಾ ಇದೇ ನವೆಂಬರ್‌ 17 ಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

ಶಿವಣ್ಣ ನಟನೆಯ ಘೋಸ್ಟ್‌ ಸಿನಿಮಾ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುವ ಮುನ್ನವೇ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಜೈಲರ್‌ ನಲ್ಲಿ ಶಿವಣ್ಣನ ಮಾಸ್‌ ಲುಕ್‌ ನೋಡಿದ ಸಿನಿ ಪ್ರಿಯರು ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪ್ರೇಕ್ಷಕರು ನೀರಿಕ್ಷೆ ಮಾಡಿದ್ದ ರೀತಿಯಲ್ಲಿ ಘೋಸ್ಟ್‌ ಕಮಾಲ್‌ ಮಾಡಲಿಲ್ಲ, ಬಾಕ್ಸ್‌ ಆಫೀಸ್‌ ನಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್‌ ಕೂಡ ಮಾಡಲಿಲ್ಲ. ಈ ನಡುವೆ ಚಿತ್ರತಂಡ ಒಟಿಟಿಯಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಜ್ಜಾಗಿದೆ. ನವೆಂಬರ್‌ 17 ಕ್ಕೆ ಜೀ 5 ನಲ್ಲಿ ಘೋಸ್ಟ್‌ ತೆರೆಕಾಣಲು ಸಿದ್ಧವಾಗಿದೆ.

ಎಂ.ಜಿ ಶ್ರೀನಿವಾಸ್‌ ನಿರ್ದೇಶನದಲ್ಲಿ ಸುಮಾರು ಹದಿನೈದು ಕೋಟಿ ಬಜೆಟ್‌ ನಲ್ಲಿ ಕನ್ನಡ,ತೆಲುಗು,ತಮಿಳು,ಮಲಯಾಳಂ ಮತ್ತು ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ತಯಾರದ ಘೋಸ್ಟ್‌ ಸಿನಿಮಾದಲ್ಲಿ ಶಿವರಾಜ್ ಕುಮಾರ್‌ ಡಬಲ್‌ ಆಕ್ಟಿಂಗ್‌ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!