ಬೆಂಗಳೂರು : ಶ್ರೇಯಸ್ ಅಯ್ಯರ್ ಹಾಗೂ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಅವರ ಜುಗಲ್ ಬಂಧಿ ಶತಕದ ಬಲದಿಂದ ಭಾರತ ತಂಡವು ನೆದರ್ಲ್ಯಾಂಡ್ಸ್ ವಿರುದ್ಧ 411ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ನೆದರ್‌ಲ್ಯಾಂಡ್ಸ್ ನಡುವಿನ ಪಂದ್ಯದಲ್ಲಿ ಭಾರತ ತಂಡವು ಈ ಟೂರ್ನಿಯ ಪಂದ್ವೊಂದರಲ್ಲಿ ಪೇರಿಸಿದ ಬೃಹತ್ ಮೊತ್ತ ಇದಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಂದುಕೊಂಡಂತೆ ಉತ್ತಮ ಆರಂಭ ಪಡೆಯಿತು, ಆರಂಭಿಕರಾದ ನಾಯಕ ರೋಹಿತ್ ಶರ್ಮಾ (61), ಶುಭ್‌ಮನ್ ಗಿಲ್ (51), ವಿರಾಟ್ ಕೊಹ್ಲಿ (51) ತಂಡಕ್ಕೆ ಉತ್ತಮ ಆರಂಭ ನೀಡಿದರು.
ನಂತರ ಒಂದಾದ ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಕೇವಲ 135 ಎಸೆತಗಳಲ್ಲಿ 208 ರನ್‌ಗಳ ಕಾಣಿಕೆ ನೀಡಿ ತಂಡ ಬೃಹತ್ ಮೊತ್ತ ಕಲೆಹಾಕಲು ಸಹಕರಿಸಿದರು.
ಅಯ್ಯರ್ ತಾವಾಡಿದ 94 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್ ಸೇರಿ 128 ರನ್ ಕಲೆಹಾಕಿದರೇ, ಕೇವಲ 64 ಎಸೆತಗಳನ್ನು ಎದುರಿಸಿದ ಕನ್ನಡಿಗ ರಾಹುಲ್ 11 ಬೌಂಡರಿ ಮತ್ತು 4 ಸಿಕ್ಸರ್ ನಿಂದ 102 ರನ್ ಕಲೆಹಾಕಿದರು.
ಬಾಸ್ ಡಿ ಲೀಡೆ 2 ವಿಕೆಟ್ ಪಡೆದರೆ, ಲೋಗನ್ 10 ಓವರ್‌ಗಳಲ್ಲಿ ಬರೋಬ್ಬರಿ 107 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.