ಶಿವಮೊಗ್ಗ : ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲ, ಸಾಮೂಹಿಕ ನೇತೃತ್ವದಲ್ಲಿ ಲೋಕಸಭಾ ಚುನಾವಣೆ-2024 ನಡೆಯಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ ಯಾರ ಮೇಲೂ ನಿಂತಿಲ್ಲ, ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯುವುದಿಲ್ಲ. ನರೇಂದ್ರ ಮೋದಿ ಕೂಡಾ ಬಿಜೆಪಿಯಲ್ಲಿ ಓರ್ವ ಕಾರ್ಯಕರ್ತರಾಗಿದ್ದಾರೆ, ನಾನು ಸಹಾ ಒಬ್ಬ ಕಾರ್ಯಕರ್ತನಾಗಿದ್ದು, ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲ ಎಂದು ಹೇಳಿದರು.
ಕಾಶ್ಮೀರಾದಿಂದ ಕನ್ಯಾಕುಮಾರಿ ವರೆಗೆ ಕಾಂಗ್ರೆಸ್ ಪಕ್ಷ ಅಸ್ಥಿತ್ವದಲ್ಲಿಲ್ಲ, ಕಾಂಗೆಸ್ ಪಕ್ಷ ಎಲ್ಲಿದೆ ಎನ್ನುವುದೇ ಗೊತ್ತಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಒಡೆದು ಚೂರಾಗಿದೆ ಎಂದು ಕಿಡಿಕಾರಿದರು.
ನೆಹರು, ಇಂದಿರಾ ಗಾಂಧಿ ಸೇರಿದಂತೆ ಎಲ್ಲರೂ ಕುಟುಂಬದವರು ಅವರಿಗೆ ಕುಟುಂಬ ರಾಜಕಾರಣ ಬಗ್ಗೆ ಮಾತನಾಡಲು ಅವರಿಗೆ ಆಧಿಕಾರ ಇದೆಯೇ ಎಂದು ಪ್ರಶ್ನಿಸಿದ ಅವರು, ನಾವೆಲ್ಲಾ ಒಟ್ಟಾಗಿದ್ದೇವೆ. ವಿಜಯೇಂದ್ರ ಅವರಿಂದ ಸಂಘಟನೆ ಮುಂದೆ ಬೆಳೆಯುತ್ತದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.