Mysore
35
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಹಗುರ ಮಾತು ಬೇಡ ದಾಖಲೆ ಮುಂದಿಡಿ : ಮೋದಿಗೆ ಸಿದ್ದು ಸವಾಲ್

ಬೆಂಗಳೂರು : ಮೋದಿಯವರು ರಾಜಕೀಯ ಭಾಷಣ ಮಾಡಿದ್ದಾರೆ. ರಾಜಕೀಯ ಆರೋಪ ಮಾಡಿದ್ದಾರೆ. ಅವರು ಊಹಾಪೋಹಗಳ ಹೇಳಿಕೆ ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪಿಎಂ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಮದ್ಯಪ್ರದೇಶದ ಚುನಾವಣೆಯಲ್ಲಿ ಕರ್ನಾಟಕವನ್ನ ಟಾರ್ಗೇಟ್ ಮಾಡ್ತಿದ್ದಾರೆ ಎಂಬ ವಿಚಾರವಾಗಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಮೋದಿಯವರು ಪಾಪ ನಿರಾಶರಾಗಿದ್ದಾರೆ. ಮೋದಿಯವರು ರಾಜ್ಯಕ್ಕೆ 48 ಬಾರಿ ಬಂದ್ರಲ್ಲಾ ಅವರು ಹೋದ ಕಡೆಯಲ್ಲಾ ಸೋತ್ರು. ಎಲ್ಲೆಲ್ಲಿ ರೋಡ್ ಶೋ ಮಾಡಿದ್ರು, ಎಲ್ಲೆಲ್ಲಿ ಸಾರ್ವಜನಿಕ ಸಭೆ ಮಾಡಿದ್ರು, ಎಲ್ಲಾ ಕಡೆ ಸೋತು ಬಿಟ್ರು. ಹಾಗಾಗಿ ಇಲ್ಲಿಯವರೆಗೆ ವಿರೋದ ಪಕ್ಷದ ನಾಯಕನ್ನು ಆಯ್ಕೆ ಮಾಡಲು ಹೋಗ್ಲಿಲ್ಲಾ. ಅಂದ್ರೆ ಅಷ್ಟರಮಟ್ಟಿಗೆ ಬಿಜೆಪಿ ದಿವಾಳಿಯಾಗಿದೆ ಎಂದು ಗರಂ ಆಗಿ ಹೇಳಿದ್ದಾರೆ.

ಡಿಸಿಎಂ ಸಿಎಂ ಲೂಟಿ ಮಾಡ್ತಿದ್ದಾರೆ ಎಂದು ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, 40% ಲೂಟಿ ಮಾಡ್ತಿದ್ದಾರೆ ಅಂತ ಹೇಳಿದ್ದು ಯಾರು? ಆಗ ಯಾವ ಸರ್ಕಾರ ಇತ್ತು. ಆಗ ನರೇಂದ್ರ ಮೋದಿ ಪಕ್ಷ ತಾನೆ ಇದ್ದಿದ್ದು. ನಮ್ಮ ಮೇಲೆ ಆ ತರ ಹೇಳಿದ್ರಾ? ಅದಕ್ಕೆ ನಾವೆಲ್ಲಾ ತನಿಖೆ ಮಾಡಿಸುತ್ತಿದ್ದೇವೆ. 40% ಕಮಿಷನ್ ಸರ್ಕಾರ ಅಂತ ಹೇಳಿದ್ದು ಯಾರಪ್ಪ ಯಾರ ಕಾಲದಲ್ಲಿ?, ಆಗ ಯಾವ ಸರ್ಕಾರ ಇತ್ತು?, ಈ ದೇಶದ ಪ್ರಧಾನಿಯಾಗಿ ಅದನ್ನು ಹೇಳಬೇಕಲ್ವಾ..? ಅವರಿಗೆ ಏನಾದ್ರು ದಾಖಲಾತಿ ಇದ್ರೆ ಹೇಳಲಿ. ಒಬ್ಬ ಪ್ರಧಾನಿಯಾಗಿದ್ದುಕೊಂಡು ಸುಳ್ಳುಗಳನ್ನು ಹೇಳಬಾರದು, ಲಘುವಾಗಿ ಮಾತಾನಾಡಬಾರದು. ಅವರಿಗೆ ದಾಖಲಾತಿ ಏನಾದ್ರು ಇದ್ರೆ ಅವರಿಗೆ ಐಬಿ,ರಾ, ಸಿಬಿಐ ಇಂಟೆಲಿಜೆನ್ಸಿ ಇದೆ ಹೇಳಲಿ. ಇವತ್ತು ದೇಶ ಆರ್ಥಿಕವಾಗಿ ದಿವಾಳಿಯಾಗಿದೆ ಎಂದರು.

ನಮ್ಮ ರಾಜ್ಯಕ್ಕೆ ಕೊಡಬೇಕಾಗಿರುವುದನ್ನೆ ಕೊಡೊಕ್ಕೆ ಆಗ್ತಿಲ್ಲಾ. ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನೂ ಕೂಡ ಅವರಿಗೆ ಬರಗಾಲದ ಪರಿಹಾರ ಕೊಡೋಕೆ ಆಗಿಲ್ಲಾ.ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಸಾದ್ಯವಿಲ್ಲ ಅಂತಾ ಪ್ರಧಾನಿ ಮೋದಿ ಹೇಳಿದ್ರು. ಈಗ ಜಾರಿ ಮಾಡಿಲ್ವಾ ನಾವು ನಾನು ಈ ರೀತಿ ಸ್ಟೆಟ್ಮೆಂಟ್ ಕೊಡ್ತಾರೆ ಅಂತಾ ಎಕ್ಸೆಪ್ಟ್ ಮಾಡಿರಲಿಲ್ಲಾ. ಅವರಿಗೆ ಶೋಭೆ ತರುವಂತದಲ್ಲಾ ಇದು. ಮದ್ಯಪ್ರವೇಶದಲ್ಲಿ ಮಾಡಿರುವ ಎಲೆಕ್ಷನ್ ಭಾಷಣ ಅದು ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!