Mysore
16
clear sky

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮದ್ಯ ನೀಡದಿದ್ದರೆ ವಿಮಾನ ಸ್ಪೋಟಿಸುತ್ತೇನೆ: ರಷ್ಯಾ ಹಾಕಿ ಆಟಗಾರನ ಕಿರಿಕ್

ನವದೆಹಲಿ : ಮದ್ಯ ಸೇವಿಸಲು ಅವಕಾಶ ನೀಡದಿದ್ದರೆ ವಿಮಾನ ಸ್ಪೋಟಿಸುವುದಾಗಿ ರಷ್ಯಾ ಹಾಕಿ ಆಟಗಾರ ಬೆದರಿಕೆ ಹಾಕಿದ್ದಾನೆ ಎಂದು ನ್ಯೂಸ್ ವೀಕ್ ವರದಿ ಮಾಡಿದೆ. ಯೆಕಟೆರಿನ್‍ಬರ್ಗ್‍ನಲ್ಲಿರುವ ರಷ್ಯಾದ ಹಾಕಿ ಲೀಗ್ ತಂಡದ ಮೊನೆಟ್ಕಾದಿಂದ ಆಂಡ್ರೇ ಸಿಡಿಯಾಕಿನ್ ಅವರು ವಿಮಾನದಲ್ಲಿ ವೋಡ್ಕಾಗೆ ಬೇಡಿಕೆಯಿಟ್ಟರು, ಆದಾಗ್ಯೂ, ಸಿಬ್ಬಂದಿ ಅವರಿಗೆ ಆದ್ಯತೆಯ ಪಾನೀಯವನ್ನು ನೀಡಲು ನಿರಾಕರಿಸಿದ ನಂತರ ಅವರು ಈ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಆತ ಮದ್ಯಕ್ಕಾಗಿ ಬೇಡಿಕೆಯನ್ನು ಮುಂದುವರೆಸಿದರು ಕ್ರ್ಯೂ ಸಿಬ್ಬಂದಿ ಮದ್ಯ ನೀಡಲು ನಿರಾರಕರಿಸಿದಾಗ ನನ್ನ ಬಳಿ ಸ್ಪೋಟಕ ಸಾಧನವಿದೆ ಮದ್ಯ ನೀಡದಿದ್ದರೆ ವಿಮಾನ ಉಡಾಯಿಸುವುದಾಗಿ ಬೆದರಿಕೆ ಹಾಕಿದ ಎನ್ನಲಾಗಿದೆ. ತಕ್ಷಣ ಸಿಬ್ಬಂದಿಗಳು ವಿಮಾನದ ಉಳಿದ ಭಾಗಗಳಲ್ಲಿ ಬಾಂಬ್ ಅಥವಾ ಶಸ್ತ್ರಾಸ್ತ್ರಗಳನ್ನು ಹುಡುಕಲು ಮುಂದಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವರದಿಯಾಗಿದೆ.

 

ಇದಲ್ಲದೆ, ಮಾಸ್ಕೋಗೆ ಆಗಮಿಸಿದ ನಂತರ ಶೆರೆಮೆಟಿವೊ ವಿಮಾನ ನಿಲ್ದಾಣದಿಂದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯಿಂದ ವಿಮಾನವನ್ನು ಪರೀಕ್ಷಿಸಲಾಯಿತು ಆದರೂ ಸಿಡಿಯಾಕಿನ್ ಅವರನ್ನು ಬಂಧಿಸಲಾಗಿಲ್ಲ ಮತ್ತು ಅವರು ಪ್ರಯಾಣ ಮುಂದುವರೆಸಲು ಅವಕಾಶ ನಿರಾಕರಿಸಲಾಯಿತು ಎಂದು ತಿಳಿದುಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!