Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಬಾಂಗ್ಲಾ – ಪಾಕ್ ಪಂದ್ಯದ ವೇಳೆ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ: ನಾಲ್ವರ ತೀವ್ರ ವಿಚಾರಣೆ

ಕೋಲ್ಕತ್ತಾ: ವಿಶ್ವಕಪ್‌ ಪಂದ್ಯದ ವೇಳೆ ಮೈದಾನದಲ್ಲಿ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಂಗಳವಾರ(ಅ.31 ರಂದು) ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಪ್ಯಾಲೆಸ್ತೀನ್‌ ಧ್ವಜವನ್ನು ಪ್ರದರ್ಶಿಸಲಾಗಿದೆ. ಸ್ಟೇಡಿಯಂನ ಜಿ1 ಹಾಗೂ ಹೆಚ್‌ 1 ಬ್ಲಾಕ್‌ ನಲ್ಲಿ ಈ ಘಟನೆ ನಡೆದಿದೆ. ಬಾಂಗ್ಲಾದೇಶ ಬ್ಯಾಟಿಂಗ್ ಮಾಡುವಾಗ ಕೆಲವರು ಪ್ಯಾಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ್ದಾರೆ.

ಇಸ್ರೇಲ್‌ – ಹಮಾಸ್‌ ನಡುವೆ ನಡೆಯುತ್ತಿರುವ ಯುದ್ಧವನ್ನು ವಿರೋಧಿಸುವ ನಿಟ್ಟಿನಲ್ಲಿ ಪ್ಯಾಲೆಸ್ತೀನ್‌ ಧ್ವಜವನ್ನಿಡಿದು ಪ್ರದರ್ಶಿಸಿದ್ದಾರೆ ಎಂದು ವರದಿ ಆಗಿದೆ.

ಪ್ಯಾಲೆಸ್ತೀನ್‌ ಧ್ವಜವನ್ನಿಡಿದು ಪ್ರದರ್ಶನ ಮಾಡಿದ್ದು, ಮಾತ್ರವಲ್ಲದೆ ಫೋಟೋ ತೆಗೆಸಿಕೊಂಡಿದ್ದಾರೆ. ಮಾಧ್ಯಮದವರ ಕಣ್ಣಿಗೆ ಕಂಡಾಗ ಮೈದಾನದಿಂದ ಹೊರಹೋಗಲು ಯತ್ನಿಸಿದ್ದಾರೆ. ಧ್ವಜ ಪ್ರದರ್ಶನವನ್ನು ಹಲವಾರು ಪ್ರೇಕ್ಷಕರು ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಗಮನಿಸಿದ್ದು, ಈ ರೀತಿ ಮಾಡಿದವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಮಾಸ್‌ – ಇಸ್ರೇಲ್‌ ನಡುವಿನ ಯುದ್ದ ನಿಲ್ಲಬೇಕು. ಈ ಕಾರಣದಿಂದ ಮೂವರಿಂದ – ನಾಲ್ಕು ಮಂದಿ ಯುದ್ದವನ್ನು ವಿರೋಧಿಸುವ ನಿಟ್ಟಿನಲ್ಲಿ ಧ್ವಜವನ್ನು ಪ್ರದರ್ಶನ ಮಾಡಿದ್ದು, ಇದು ವೈರಲ್‌ ಆಗಿ ವಿವಾದವಾಗುತ್ತದೆ ಎನ್ನುವುದು ಗೊತ್ತಿರಲಿಲ್ಲ ಎಂದು ಧ್ವಜ ಪ್ರದರ್ಶನ ಮಾಡಿದ ಶೆಹನಾಜ್ ಹೇಳಿದ್ದಾರೆ.

ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸಿ ಮಧ್ಯರಾತ್ರಿ ಬಿಡುಗಡೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

“ಇದನ್ನು ತಡೆಯುವುದು ಪೊಲೀಸರ ಜವಾಬ್ದಾರಿ. ಯಾರಾದರೂ ಇದನ್ನು ಹೇಗೆ ಮಾಡಬಹುದು? ಇದು ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತದೆ. ಪಶ್ಚಿಮ ಬಂಗಾಳದಲ್ಲಿ ತುಷ್ಟೀಕರಣ ರಾಜಕೀಯವಿದೆ. ಇದನ್ನು ನಿರೀಕ್ಷಿಸಿರಲಿಲ್ಲ” ಎಂದು ಬಿಜೆಪಿಯ ನಾಯಕ ಶಿಶಿರ್‌ ಬಜೋರಿಯಾ ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ