Mysore
13
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ದಸರಾ ಕುಸ್ತಿ ಪಂದ್ಯಾವಳಿಗೆ ಸಿಎಂ ಚಾಲನೆ

ಮೈಸೂರು : ದಸರಾ ಮಹೋತ್ಸವದ ಪ್ರಮುಖ ಕ್ರೀಡೆ ದಸರಾ ಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡಿದರು.

ನಗರದ ವಸ್ತು ಪ್ರದರ್ಶನ ಆವರಣದಲ್ಲಿರುವ ದೇವರಾಜ ಅರಸು ವಿವಿದ್ದೋದ್ದೇಶ ಕ್ರೀಡಾಂಗಣದಲ್ಲಿ ಜರುಗಿದ ಕುಸ್ತಿ ಪಂದ್ಯಾವಳಿಯನ್ನು ರವಿವಾರ ಕುಸ್ತಿ ಗದೆ ಎತ್ತುವ ಮೂಲಕ ಉದ್ಘಾಟಿಸಿದರು.

ದಸರಾ ಕುಸ್ತಿ ಎಂದರೆ ಜಗತ್ಪ್ರಸಿದ್ಧ. ಈ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ರಾಜ್ಯ, ಹೊರ ರಾಜ್ಯಗಳಿಂದಲೂ ಪೈಲ್ವಾನರು ಬರುತ್ತಾರೆ.

ದಾವಣಗೆರೆಯ ಪೈ.ಕಾರ್ತಿಕ್ ಕಾಟೆ ಮತ್ತು ದೆಹಲಿಯ ಪೈ.ವಿಕಿ ಅವರ ನಡುವೆ ನಡೆದ ಅರ್ಧ ಗಂಟೆ ನಡೆದ ಕುಸ್ತಿ ಪಂದ್ಯಾವಳಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವೀಕ್ಷಿಸಿದರು.

ನಂತರ ಚಿಕ್ಕಹಳ್ಳಿಯ ಪೈಲ್ವಾನ್ ರವಿ ಮತ್ತು ಪವನ್ ರವರ ನಡುವೆ ಕುಸ್ತಿ ಪಂದ್ಯಾವಳಿ ನಡೆಯಿತು.

ಇದೇ ವೇಳೆ ಕುಸ್ತಿ ಪೈಲ್ವಾನರ ಸಂಘದಿಂದ ಕುಸ್ತಿ ಹಾಸ್ಟೆಲ್ ಪ್ರಾರಂಭ ಮಾಡಲು ಮನವಿ ಸಲ್ಲಿಸಲಾಯಿತು.

ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಡಿ‌.ರವಿಶಂಕರ್, ಟಿ‌ಎಸ್.ಶ್ರೀವತ್ಸ, ಅನಿಲ್ ಚಿಕ್ಕಮಾದು, ಕೃಷ್ಣಮೂರ್ತಿ, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ವಿಧಾನ ಪರಿಷತ್ ಶಾಸಕರಾದ ಮಂಜೇಗೌಡ, ತಿಮ್ಮಯ್ಯ, ಮಹಾ ಪೌರರದ ಶಿವಕುಮಾರ್, ಜಿಲ್ಲಾಧಿಕಾರಿಗಳಾದ ಡಾ ಕೆ. ವಿ ರಾಜೇಂದ್ರ, ಪೊಲೀಸ್ ಆಯುಕ್ತರಾದ ರಮೇಶ್ ಬಿ. ಸೀಮಾ ಲಾಟ್ಕರ್, ಅಪರ ಪೊಲೀಸ್ ಅಧೀಕ್ಷಕರಾದ ಡಾ. ನಂದಿನಿ, ಉಪ ಮಹಾಪೌರರಾದ ಜಿ ರೂಪ, ನಂಜನಗೂಡು ಪೊಲೀಸ್ ಅಧೀಕ್ಷಕರಾದ ಗೋವಿಂದರಾಜು ಹಾಗೂ ದಸರಾ ಕುಸ್ತಿ ಸಮಿತಿಯ ಅಧಿಕಾರಿಗಳು ಭಾಗವಹಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!