ಮೈಸೂರು : ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಚೇತನ್ ಮತ್ತು ಕುಟುಂಬದವರು ಇಸ್ರೇಲ್ ನಲ್ಲಿ ಸಿಲುಕಿಕೊಂಡಿದ್ದಾರೆ. ಈ ವೇಳೆ ಮನೆಯವರಿಗೆ ವೀಡಿಯೋ ಕಾಲ್ ಮೂಲಕ ನಾವು ಸುರಕ್ಷತವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಚೇತನ್ ಪತ್ನಿ ಶಿಲ್ಪಶ್ರೀ ಹಾಗೂ ಒಂದುವರೆ ವರ್ಷದ ಮಗು ಸದ್ಯಕ್ಕೆ ಇಸ್ರೇಲ್‌ನಲ್ಲಿ ಸುರಕ್ಷಿತವಾಗಿದ್ದಾರೆ
ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದ ಚೇತನ್. 2 ವರ್ಷದ ಹಿಂದೆ ಉನ್ನತ ವೈದ್ಯಕೀಯ ಶಿಕ್ಷಣಕ್ಕೆ ಇಸ್ರೇಲ್‌ಗೆ ತೆರಳಿದ್ದಾರೆ
ಇದೀಗ ಇಸ್ರೇಲ್ ನಲ್ಲಿ ನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಹೆದರಿರುವ ಕುಟುಂಬಸ್ಥರಿಗೆ ನಾವು ಸುರಕ್ಷಿತವಾಗಿದ್ದೇವೆ ಎಂದು ವೀಡಿಯೋ ಕಾಲ್ ಮಾಡಿ ಧೈರ್ಯ ತುಂಬಿದ್ದಾರೆ. ಆದರೂ ಸದ್ಯದ ಸ್ಥಿತಿಯಲ್ಲಿ ಚೇತನ್ ಅವರ ಕುಟುಂಬ ವರ್ಗದವರು ಆತಂಕದಲ್ಲಿದ್ದಾರೆ.
ಇಸ್ರೇಲ್‌ನ ರೆಹೋವಾತ್ ನಗರದಲ್ಲಿ ಸುರಕ್ಷಿತವಾಗಿರುವ ಚೇತನ್ ಹಾಗು ಪತ್ನಿ ಮತ್ತು ಮಗುವನ್ನು ಇಸ್ರೇಲ್ ನ ಅವರ ಇನ್ಸ್ಟಿಟ್ಯೂಟ್ ಕೂಡ ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಯುದ್ಧದ ವೇಳೆ ಸೈರನ್ ಬಂದಾಗ ಸೇಫ್ಟಿ ರೂಂ ನಲ್ಲಿ ಉಳಿದು ಕೊಳ್ಳುತ್ತಿರುವುದಾಗಿ ತಿಳಿಸಿದ ಚೇತನ್.ನಾವು ಇರುವ ಕಡೆಯೇ ಸೇಫ್ಟಿ ರೂಂ ಇದೆ ಎಂದಿದ್ದಾರೆ
ಇಸ್ರೇಲ್ ನಲ್ಲಿ ಇಷ್ಟೆಲ್ಲಾ ಯುದ್ಧದ ಅವಾಂತರ ನಡೆಯುತ್ತಿದ್ದರೂ ಅಲ್ಲಿದ್ದು ಕೊಂಡು ಆತನೆ ನಮಗೆ ದೈರ್ಯ ಹೇಳುತ್ತಿದ್ದಾನೆ ಆದರೆ ಇದೆಲ್ಲ ನೋಡುತ್ತಿದ್ದರೆ ನಮಗೆ ಧೈರ್ಯ ಸಾಲುತ್ತಿಲ್ಲ ಭಯವಾಗುತ್ತಿದೆ ಎಂದು ದೇವನೂರು ಗ್ರಾಮದಲ್ಲಿರುವ ಚೇತನ್ ಸಹೋದರಿ ಲಾವಣ್ಯ ತಿಳಿಸಿದರು.