Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಿಶ್ವಕಪ್ 2023| ಕಿವೀಸ್‌‌ ದಾಳಿಗೆ ಮಂಕಾದ ಇಂಗ್ಲೆಂಡ್‌‌: ಟಾರ್ಗೆಟ್‌ 283

ಅಹಮದಾಬಾದ್‌ : ವಿಶ್ವಕಪ್ 2023ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ರನ್ನರ್ಸ್‌ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಇತ್ತಂಡಗಳ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬೌಲರ್ ಗಳು ಇಂಗ್ಲೆಂಡ್ ತಂಡದ ಬ್ಯಾಟಿಂಗ್‌ ಅನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಇಂಗ್ಲೆಂಡ್ ಪರ ಜೋ ರೂಟ್‌ ಹೊರತುಪಿಡಿಸಿ ಯಾವೊಬ್ಬ ಆಟಗಾರನೂ ಸಹ ಉತ್ತಮ ಬ್ಯಾಟಿಂಗ್‌ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ ನಿಗದಿತ 50 ಓವರ್‌ಗೆ 9 ವಿಕೆಟ್ ನಷ್ಟಕ್ಕೆ 282 ರನ್‌ ಗಳಿಸುವ ಮೂಲಕ ನ್ಯೂಜಿಲ್ಯಾಂಡ್ ತಂಡಕ್ಕೆ 283 ರನ್‌ ಗಳ ಗುರಿ ನೀಡಿದೆ.

ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್ ತಂಡ ಆರಂಭಿಕ ಆಘಾತ ಅನುಭವಿಸಿತು. ಕೇವಲ 14 ರನ್‌ ಗಳಿಸಿ ಮ್ಯಾಟ್‌ ಹೆನ್ರಿಗೆ ಮಲಾನ್‌ ವಿಕೆಟ್‌ ಒಪ್ಪಿಸಿ ಹೊರನಡೆದರು. ಆಂಗ್ಲರ ಪರ ಜೋ ರೂಟ್‌ ಏಕಾಂಗಿಯಾಗಿ ಇನ್ನಿಂಗ್ಸ್‌ ಕಟ್ಟಿದರು. ರೂಟ್ 86 ಎಸೆತದಲ್ಲಿ 4 ಬೌಂಡರಿ ಜೊತೆ 1 ಸಿಕ್ಸ್ ಮೂಲಕ 77 ರನ್‌ ಗಳಿಸಿದರೆ, ನಾಯಕ ಜೋಸ್‌ ಬಟ್ಲರ್ 42 ಎಸೆತದಲ್ಲಿ 2 ಸಿಕ್ಸ್‌ ಮತ್ತು 22 ಬೌಂಡರಿ ಮೂಲಕ 43 ರನ್ ಸಿಡಿಸಿದರು. ಉಳಿಂದತೆ ಜಾನಿ ಬೈರ್‌ಸ್ಟೋವ್ 33 ರನ್, ಡೇವಿಡ್ ಮಲಾನ್ 14 ರನ್, ಹ್ಯಾರಿ ಬ್ರೂಕ್ 25 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 20 ರನ್, ಮೊಯೀನ್ ಅಲಿ 11 ರನ್, ಸ್ಯಾಮ್ ಕರನ್ 14 ರನ್, ಕ್ರಿಸ್ ವೋಕ್ಸ್ 11 ರನ್ ಗಳಿಸಿದರು.

ಇಂಗ್ಲೆಂಡ್‌ ವಿರುದ್ಧ ದಿಟ್ಟ ಪ್ರದರ್ಶನ ನೀಡಿದ ನ್ಯೂಜಿಲ್ಯಾಂಡ್ ತಂಡ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿತು. ಕಿವೀಸ್ ಪರ ಮ್ಯಾಟ್ ಹೆನ್ರಿ ಅವರು 10 ಓವರ್‌ಗೆ 48 ರನ್‌ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಆಂಗ್ಲರ ಕುಸಿತಕ್ಕೆ ಕಾರಣರಾದರು. ಉಳಿದಂತೆ ಮಿಚೆಲ್ ಸ್ಯಾಂಟ್ನರ್ 2, ಗ್ಲೆನ್ ಫಿಲಿಪ್ಸ್ 2, ರಚಿನ್ ರವೀಂದ್ರ 1 ಹಾಗೂ ಟ್ರೆಂಟ್ ಬೋಲ್ಟ್‌ ತಲಾ 1 ವಿಕೆಟ್ ಪಡೆದು ಮಿಂಚಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ