Mysore
21
mist

Social Media

ಸೋಮವಾರ, 23 ಡಿಸೆಂಬರ್ 2024
Light
Dark

ವಿಶ್ವಕಪ್‌-23: ಅಫಘಾನಿಸ್ತಾನ ಕ್ರಿಕೆಟ್‌ ತಂಡಕ್ಕೆ ಅಜಯ್ ಜಡೇಜಾ ಮೆಂಟರ್!

ನವದೆಹಲಿ : 2023ರ ಒಡಿಐ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಸಲುವಾಗಿ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯು ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ಅಜಯ್ ಜಡೇಜಾ ಅವರನ್ನು ಮೆಂಟರ್ ಹಾಗೂ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಜೊನಾಥನ್ ಟ್ರಾಟ್ ಅವರನ್ನು ಕೋಚಿಂಗ್ ಬಳಗಜ್ಜೆ ಸೇರಿಸಿಕೊಳ್ಳಲಾಗಿದೆ.

ಭಾರತ ತಂಡದ ಮಾಜಿ ಆಲ್‌ರೌಂಡರ್ ಅಜಯ್ ಜಡೇಜಾ ಅಫಘಾನಿಸ್ತಾ ತಂಡದ ಜೆರ್ಸಿ ಧರಿಸಿ ತಂಡದ ಸ್ಟಾರ್ ಆಲ್‌ರೌಂಡರ್ ರಶೀದ್ ಖಾನ್‌ಗೆ ಮಾರ್ಗದರ್ಶನ ನೀಡುತ್ತಿರುವ ಪೋಟೋಗಳನ್ನು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ ಹಾಗೂ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.

“ಅಫಘಾನಿಸ್ತಾನ ಕ್ರಿಕೆಟ್ ಮಂಡಳಿಯು ಭಾರತ ತಂಡದ ಮಾಜಿ ನಾಯಕ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಜಯ್ ಜಡೇಜಾ ಅವರನ್ನು 2023ರ ಒಡಿಐ ವಿಶ್ವಕಪ್ ಟೂರ್ನಿಯ ಸಲುವಾಗಿ ಮೆಂಟರ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ,” ಎಂದು ತನ್ನ ಅಧಿಕೃತ ಟ್ವೀಟರ್‌ನಲ್ಲಿ ಪ್ರಕಟಿಸಿದೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದ ಜಡೇಜಾ

ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟರ್ ಹಾಗೂ ಫೀಲ್ಡರ್ ಆಗಿದ್ದ ಅಜಯ್ ಜಡೇಜಾ, 1998ರಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದರು. 1992, 1996 ಹಾಗೂ 1999ರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಅನುಭವವು ಜಡೇಜಾಗಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 1996ರಲ್ಲಿ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ದ ಜಡೇಜಾ, 45 ರನ್ ಸಿಡಿಸಿ ತಂಡದ ಗೆಲುವಿಗೆ ನೆರವಾಗಿದ್ದರು.

https://x.com/ACBofficials/status/1708783931544232041?s=20

ಅಜೇಯ್ ಜಡೇಜಾರವರ ಅಂಕಿ ಅಂಶಗಳು

ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಅರೆಕಾಲಿಕ ಬೌಲರ್ ಆಗಿದ್ದ‌ ಅಜಯ್ ಜಡೇಜಾ 15 ಟೆಸ್ಟ್ ಪಂದ್ಯಗಳಿಂದ 576 ರನ್ ಬಾರಿಸಿದ್ದಾರೆ. 196 ಏಕದಿನ ಪಂದ್ಯಗಳಿಂದ 37.47ರ ಸರಾಸರಿಯಲ್ಲಿ 5,359 ರನ್ ಗಳಿಸಿದ್ದು, ಒಟ್ಟಾರೆ 6 ಶತಕ ಹಾಗೂ 34 ಅರ್ಧಶತಕ ಸಿಡಿಸಿದ್ದಾರೆ. ಇದರ 20 ಒಡಿಐ ವಿಕೆಟ್ ಪಡೆದಿದ್ದಾರೆ. 52ರ ಪ್ರಾಯದ ಅಜಯ್ ಜಡೇಜಾ 2015ರಲ್ಲಿ ದಿಲ್ಲಿ ತಂಡದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.

ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ಸಾಧನೆ

2015ರಲ್ಲಿ ಪ್ರಪ್ರಥಮ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದ ಅಫಘಾನಿಸ್ತಾನ ತಂಡ ಸ್ಕಾಟ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. 2019ರಲ್ಲಿ ಒಂದೇ ಒಂದು ಪಂದ್ಯ ಗೆಲ್ಲದೆ ನಿರಾಸೆ ಅನುಭವಿಸಿತ್ತು. 2023ರಲ್ಲಿ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದ್ದು, ಇದರ ಅಂಗವಾಗಿ ಅಜಯ್ ಜಡೇಜಾ ಹಾಗೂ ಜೊನಾಥನ್ ಟ್ರಾಟ್ ಅವರನ್ನು ತಂಡದ ಕೋಚಿಂಗ್‌ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ.

2023ರ ವಿಶ್ವಕಪ್ ಟೂರ್ನಿಯಲ್ಲಿ ಅಫಘಾನಿಸ್ತಾನ ತಂಡದ ಪಯಣ

ಧರ್ಮಶಾಲಾದ ಎಚ್‌ಪಿಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಅಕ್ಟೋಬರ್ 7ರಂದು ಬಾಂಗ್ಲಾದೇಶ ವಿರುದ್ದ ಸೆಣಸುವ ಮೂಲಕ ವಿಶ್ವಕಪ್ ಟೂರ್ನಿಯ ಪಯಣ ಆರಂಭಿಸಲಿರುವ ಅಫಘಾನಿಸ್ತಾನ, ನಂತರ ಭಾರತ (ಅ.11), ಇಂಗ್ಲೆಂಡ್ (ಅ.15), ನ್ಯೂಜಿಲೆಂಡ್ (ಅ.18) ಹಾಗೂ ಪಾಕಿಸ್ತಾನ (ಅದು.23) ತಂಡಗಳ ಎದುರು ಕಠಿಣ ಸವಾಲು ಎದುರಿಸಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ