Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕಾವೇರಿ ನೀರಿನ ವಿಚಾರಕ್ಕೆ ಕೇಂದ್ರದಿಂದ ತಂಡ ಕಳುಹಿಸಲಿ : ಸಿದ್ದರಾಮಯ್ಯ

ಮೈಸೂರು : ಕನ್ನಂಬಾಡಿ ಕಟ್ಟೆ ಸೇರಿದಂತೆ ಜಲಾಶಯಗಳಲ್ಲಿ ನೀರು ಇರುವ ಕುರಿತು ವಾಸ್ತವ ಪರಿಶೀಲನೆ ನಡೆಸಲು ಕೇಂದ್ರ ತಜ್ಞರ ತಂಡವನ್ನು ಕಳುಹಿಸಬೇಕು.ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಒತ್ತಾಯಿಸಿದರು. ಕೇಂದ್ರದಿಂದ ತಂಡ ಕಳುಹಿಸಬೇಕು ಅಂತ ಹೇಳಿ ಎರಡು ಬಾರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಕೇಂದ್ರ ಸಚಿವರ ಗಮನಕ್ಕೂ ತಂದಿದ್ದೇನೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೂಡ ಈಗ ಪತ್ರ ಬರೆದು ಕೇಳಿದ್ದಾರೆ. ಈಗಲಾದರೂ ಕೇಂದ್ರದಿಂದ ತಂಡ ಕಳುಹಿಸಲಿ ಎಂದು ಹೇಳಿದರು.

ಕೇಂದ್ರದ ತಂಡ ಯಾಕೆ ಬರುತ್ತಿಲ್ಲ ಅಂತ ಬಿಜೆಪಿಯವರು ಹೇಳಲಿ. ಸುಮ್ಮನೆ ಕರ್ನಾಟಕದ ಬಿಜೆಪಿ ನಾಯಕರು ಹಾದಿಬೀದಿಯಲ್ಲಿ ಹೋರಾಟಮಾಡುವ ಬದಲಿಗೆ ಕೇಂದ್ರದಿಂದ ತಜ್ಞರ ತಂಡ ಕರೆಸುವಂತೆ ಮಾಡಲಿ ಎಂದು ಕಿಡಿಕಾರಿದರು. ನ್ಯಾಯಾಲಯದ ಮಧ್ಯಸ್ಥಿಕೆ ಇಲ್ಲದೆ ಎರಡು ರಾಜ್ಯಗಳು ಕುಳಿತು ಮಾತುಕತೆಗೆ ಈಗಲೂ ನಾವು ಸಿದ್ದವಿದ್ದೇವೆ ಎಂದರು. ರಾಜ್ಯ ಕಾಂಗ್ರೆಸ್ ಡಿಎಂಕೆ ಬಿ ಟೀಮ್ ಎಂಬ ಮಾಜಿ‌ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಎಐಎಡಿಎಂಕೆ ಬಿಜೆಪಿ ಜೊತೆ ಇತ್ತಲ್ಲ? ಆಗ ಅದು ಯಾವ ಟೀಮ್? ಸುಮ್ಮನೆ ರಾಜಕೀಯ ಕಾರಣಕ್ಕೆ ಏನೇನೋ ಹೇಳಿಕೆ ಕೊಡಬಾರದು.ಸುಮ್ಮನೆ ಬಿ ಟೀಮ್,ಬಿ ಟೀಮ್ ಎನ್ನಬಾರದು ಎಂದು ತಿರುಗೇಟು‌ನೀಡಿದರು.

ಬಿಜೆಪಿಯವರನ್ನು ನಾವು‌ ಮೊದಲಿನಿಂದಲೂ ಚಡ್ಡಿಗಳು ಎಂದೇ ಕರೆಯುತ್ತಿದ್ದೇವೆ.ಈಗ ಅವರು ಚಡ್ಡಿ ಚಳುವಳಿ ಮಾಡ್ತಾ ಇದ್ದಾರೆ.ಚಳುವಳಿ ಮಾಡಲಿ ಎಂದು ಟೀಕಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ