Mysore
20
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಏಷ್ಯನ್ ಗೇಮ್ಸ್ : ಉಜ್ಬೇಕಿಸ್ತಾನ ವಿರುದ್ಧ 16-0 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ ಭಾರತ ಹಾಕಿ ತಂಡ

ಹ್ಯಾಂಗ್‌ಝೌ : ಏಷ್ಯನ್ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಪುರುಷರ ಹಾಕಿ ತಂಡವು ಉಜ್ಬೇಕಿಸ್ತಾನ ವಿರುದ್ಧ 16-0 ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.

ಚೀನಾದ ಹ್ಯಾಂಗ್‌ಝೌನಲ್ಲಿರುವ ಗೊಂಗ್‌ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಏಷ್ಯನ್ ಗೇಮ್ಸ್ 2023ರ ಪೂಲ್ ಎ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡವು ಗೋಲುಗಳ ಸುರಿಮಳೆಗೈದಿದೆ.

ಮೊದಲ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ತಂಡವನ್ನು 16-0 ಅಂತರದಿಂದ ಸೋಲಿಸಿದೆ. ನಾಯಕ ಹರ್ವಾನ್ ಪ್ರೀತ್ ಸಿಂಗ್ ಅಲಭ್ಯತೆಯಲ್ಲಿ ಭಾರತ ಕಣಕ್ಕಿಳಿಯಿತು.

ಭಾರತದ ಪರ ಲಲಿತ್ ಉಪಾಧ್ಯಾಯ (7, 24, 37, 53ನೇ ನಿಮಿಷದಲ್ಲಿ) ಮತ್ತು ವರುಣ್ ಕುವಾರ್ (12, 36, 50, 52ನೇ ನಿಮಿಷದಲ್ಲಿ) ತಲಾ 4 ಗೋಲು ಗಳಿಸಿ ಮಿಂಚಿದರು. ಮನದೀಪ್ ಸಿಂಗ್ 3 ಗೋಲು (18, 27, 28ನೇ ನಿಮಿಷದಲ್ಲಿ), ಅಭಿಷೇಕ್ (17ನೇ ನಿ), ಅಮಿತ್ ರೋಹಿದಾಸ್ (38 ನಿ), ಸುಖಜೀತ್ (42 ನಿ), ಶಂಶೇರ್ ಸಿಂಗ್ (42’) ಮತ್ತು ಸಂಜಯ್ (‌57 ನಿ) ತಲಾ ಒಂದು ಗೋಲು ಗಳಿಸಿ ಗೆಲುವಿಗೆ ಕಾರಣರಾದರು.

ಅಗ್ರಸ್ಥಾನಕ್ಕೆ ಏರಿದ ಭಾರತ

ಈ ಸುಲಭ ಗೆಲುವಿನೊಂದಿಗೆ 3 ಬಾರಿ ಏಷ್ಯನ್ ಗೇಮ್ಸ್ ಚಾಂಪಿಯನ್ ಭಾರತವು ಏಷ್ಯನ್ ಗೇಮ್ಸ್ 2023ರ ಪುರುಷರ ಹಾಕಿ ಪೂಲ್ ಎ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಪ್ರತಿ ಪೂಲ್‌ನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸುತ್ತದೆ. ಎಫ್‌ಐಎಚ್ ಶ್ರೇಯಾಕದಲ್ಲಿ 3ನೇ ಸ್ಥಾನದಲ್ಲಿರುವ ಭಾರತದ ಪುರುಷರ ಹಾಕಿ ತಂಡವು, ಕಳೆದ ತಿಂಗಳು ತಮ್ಮ ಏಷ್ಯನ್ ಚಾಂಪಿುಂನ್ಸ್ ಟ್ರೋಫಿಗೆ ಮುತ್ತಿಕ್ಕಿತು.

ಪಂದ್ಯದ ಆರಂಭದಿಂದಲೇ ಭಾರತದ ಆಟಗಾರರು ಆಕ್ರಮಣಕಾರಿ ಆಟಕ್ಕೆ ಮುಂದಾದರು. ವಿಶ್ವದ ನಂ. 66 ಉಜ್ಬೇಕಿಸ್ತಾನ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡದೆ, ಮೆನ್ ಇನ್ ಬ್ಲೂ ಗೋಲುಗಳ ಸುರಿಮಳೆಗೈದಿತು. ಇದರೊಂದಿಗೆ ಉಜ್ಬೇಕಿಸ್ತಾನ ತಂಡದ ಮೇಲೆ ಹೆಚ್ಚು ಒತ್ತಡ ಹೇರಿತು. ಪಂದ್ಯದ 7ನೇ ನಿಮಿಷದಲ್ಲಿ ಭಾರತ ಗೋಲು ಮಳೆ, ಪಂದ್ಯದ ಮುಕ್ತಾಯದವರೆಗೂ ನಿಲ್ಲಲಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ