Mysore
23
scattered clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಅಬ್ಬಿಫಾಲ್ಸ್ ನಲ್ಲಿ ಧರೆಗುರುಳಿದ ಬೃಹತ್‌ ಗಾತ್ರದ ಮರ

ನಾಪೋಕ್ಲು : ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣ ಅಬ್ಬಿಫಾಲ್ಸ್ ನಲ್ಲಿ ಮಂಗಳವಾರ ಭಾರೀ ಅವಗಡವೊಂದು ತಪ್ಪಿದಂತಾಗಿದೆ. ಮುಖ್ಯರಸ್ತೆಯಿಂದ ಜಲಧಾರೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಬೃಹತ್‌ ಗಾತ್ರದ ಒಣಮರವೊಂದು ಮುರಿದು ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರಾಗಿದ್ದಾರೆ.

ಮಂಗಳವಾರ ಬೆಳಗ್ಗಿನಿಂದಲೇ ಜಲಧಾರೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ಈ ವೇಳೆ ಕಾಫಿ ತೋಟದಲ್ಲಿದ್ದ ಒಣ ಮರವೊಂದು ಏಕಾಏಕಿ ಮುರಿದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದ ಸ್ಥಳದಿಂದ ಕೆಲವರು ಆಗಷ್ಟೇ ಮುಂದೆ ಸಾಗಿದ್ದರೆ, ಇನ್ನೂ ಕೆಲವರು ತರಾತುರಿಯಿಂದ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಬರುತ್ತಿದ್ದರು. ಅದೃಷ್ಟವಶಾತ್, ಮರ ಮಾರ್ಗಕ್ಕೆ ಅಡ್ಡಲಾಗಿ ಬೇಲಿಯ ಮೇಲೆ ಬಿದ್ದಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!