Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಕಲಾ ನ್ಯಾಯದಿಂದ ನನಗೆ ದಸರಾ ಉದ್ಘಾಟನೆ ಅವಕಾಶ ಸಿಕ್ಕಿದೆ : ಹಂಸಲೇಖ

ಮೈಸೂರು : ಸಾಮಾಜಿಕ ಕಲಾ ನ್ಯಾಯದಿಂದ ನನಗೆ ದಸರಾ ಉದ್ಘಾಟನೆಯ ಅವಕಾಶ ದೊರೆತಿದೆ ಎಂದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.

ಮೈಸೂರಿನಲ್ಲಿ ಪತ್ರಿಕಾಸಂವಾದದಲ್ಲಿ ಮಾತನಾಡಿದ ಅವರು, ಯಾವ ಉದ್ದೇಶದಿಂದಲೂ ನನಗೆ ಉದ್ಘಾಟನೆಯ ಅವಕಾಶ ದೊರೆತಿಲ್ಲ. ಕಲಾ ನ್ಯಾಯದಿಂದ ನನಗೆ ಅವಕಾಶ ದೊರೆತಿದೆ. ಗೊರೂರು ಚೆನ್ನಬಸಪ್ಪ, ರಾಜೀವ್ ತಾರಾನಾಥ್ ಅವರನ್ನು ಆಯ್ಕೆ ಮಾಡುವಂತೆ ಹೇಳಿದ್ದೆ. ಆದರೂ ಸಿಎಂ ಸಿದ್ದರಾಮಯ್ಯ ಅವರು ಇಂತಹದೊಂದು ಅವಕಾಶ ನೀಡಿದ್ದಾರೆ.

ನಾಲ್ವಡಿ ಅವರಿಗೆ ಇಂದಿನ ಅವಕಾಶ ಸಂದತ್ತೇ ಆಗುತ್ತದೆ. ಕಲಾ ಪ್ರತಿನಿಧಿ ಯಾಗಿ ಇಲ್ಲಿಗೆ ಬಂದಿದ್ದೇನೆಂದರು.

ಸ್ಮಾರ್ಟ್ ವಿಲೇಜ್ ಮಾಡಬೇಕು. ಸ್ಮಾರ್ಟ್ ಸಿಟಿ ಬದಲಿಗೆ ಸ್ಮಾಟ್ ವಿಲೇಜ್ ಆಗಲಿದೆ. ವಿನ್ಯಾಸ ಮಾಡಿರುತ್ತಾರೆ. ಎಲ್ಲರ ಮೂಲ ರೈತರೇ ಆಗಿದ್ದಾರೆ‌.

ಕನ್ನಡ ಒಂದಂಶ ಕಾರ್ಯಕ್ರಮ ಆಗಬೇಕು‌. ಕನ್ನಡವನ್ನು ಕಾಪಾಡಿಕೊಳ್ಳದಿದ್ದರೆ. ಕನ್ನಡ ಕೈ ತಪ್ಪಿ ಹೋಗುತ್ತದೆ‌. ಕನ್ನಡದ ಮನಸ್ಸುಗಳು ಒಂದಂಶ ಕಾರ್ಯಕ್ರಮ ಆಗಬೇಕು. ಇಡೀ ನಾಡಿಗೆ ಸಲ್ಲಬೇಕಿದೆ‌.

ನೆಹರು ಕಾಲದ ಆಲೋಚನೆ ಆಗಿದೆ. ಹಿಂದಿ ಹೇರಿಕೆ ಇವತ್ತಿನ ಪಿಡುಗಲ್ಲ ಹಿಂದಿನಿಂದ ಬಂದ ಪಿಡುಗಾಗಿದೆ. ಉತ್ತರ ಭಾರತದವರ ಆಸೆಯಾಗಿದೆ‌. ದೆಹಲಿಗೆ ಕನ್ನಡ ಬೇಕಿಲ್ಲ. ನಮಗೆ ಹಿಂದಿ ಬೇಕಾಗಿಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ