Mysore
27
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಸಾರ್ವಜನಿಕವಾಗಿ ಸುದೀಪ್​ ಬಗ್ಗೆ ಹೇಳಿಕೆ ನೀಡದಂತೆ ಎಂ.ಎನ್​. ಕುಮಾರ್​ಗೆ ನ್ಯಾಯಾಲಯ ಆದೇಶ

ಬೆಂಗಳೂರು : ಸ್ಯಾಂಡಲ್​ವುಡ್​ನ ಖ್ಯಾತ ನಟ ಕಿಚ್ಚ ಸುದೀಪ್​ ಮತ್ತು ನಿರ್ಮಾಪಕ ಎಂ.ಎನ್​. ಕುಮಾರ್​ ಅವರ ನಡುವಿನ ವಿವಾದ ಈಗ ಕೋರ್ಟ್​ ಅಂಗಳದಲ್ಲಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೂಡ ಆರಂಭ ಆಗಿದೆ. ಇತ್ತೀಚೆಗೆ ಸುದೀಪ್​ ಮತ್ತು ಎಂ.ಎನ್​. ಕುಮಾರ್​ ಅವರು ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದರು. ಈಗ ನ್ಯಾಯಾಲಯದಿಂದ ಎಂ.ಎನ್​. ಕುಮಾರ್​ ಅವರಿಗೆ ಇಂಜಂಕ್ಷನ್​ ಆರ್ಡರ್​ ನೀಡಲಾಗಿದೆ.

ಸುದೀಪ್​ ಅವರ ವಿರುದ್ಧ ಅವಹೇಳನಕಾರಿಯಾಗಿ ಯಾವುದೇ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಬಾರದು ಎಂದು ಆದೇಶಿಸಲಾಗಿದೆ. ಕೋರ್ಟ್​ನಲ್ಲಿ ಕೇಸ್​ ಅಂತ್ಯವಾಗುವ ತನಕವೂ ಈ ಆದೇಶ ಅನ್ವಯ ಆಗಲಿದೆ. ಚಿತ್ರರಂಗದ ಹಿರಿಯರು ಈ ವಿವಾದವನ್ನು ಬಗೆಹರಿಸಲು ಪ್ರಯತ್ನಿದರು. ಆದರೆ ಕಾನೂನಿನ ಮೂಲಕವೇ ನ್ಯಾಯ ಪಡೆಯುವುದಾಗಿ ಸುದೀಪ್​ ಅವರು ನಿರ್ಧರಿಸಿದ್ದಾರೆ.

ಕಿಚ್ಚ ಸುದೀಪ್​ ಅವರು ಮುಂಗಡ ಹಣ ಪಡೆದು ಕಾಲ್​ಶೀಟ್​ ನೀಡಿಲ್ಲ ಎಂಬುದು ಎಂ.ಎನ್​. ಕುಮಾರ್ ಮಾಡಿದ ಆರೋಪ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಅವರು ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಇದರಿಂದ ತಮಗೆ ಮಾನಹಾನಿ ಆಗಿದೆ ಎಂದು ಸುದೀಪ್​ ಅವರು ಕೋರ್ಟ್​ ಮೆಟ್ಟಿಲೇರಿದರು. ಎಂ.ಎನ್​. ಕುಮಾರ್​ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಎನ್​.ಎಂ. ಸುರೇಶ್​ ಕೂಡ ಭಾಗಿ ಆಗಿದ್ದರು. ಅವರ ವಿರುದ್ಧವೂ ಸುದೀಪ್​ ದೂರು ನೀಡಿದ್ದರು. ಹಾಗಾಗಿ ಎನ್​.ಎಂ. ಸುರೇಶ್​ ಸಹ ಕಾನೂನಿನ ಸಂಕಷ್ಟ ಎದುರಿಸುತ್ತಿದ್ದಾರೆ.

ಆಗಸ್ಟ್​ 10ರಂದು ಸುದೀಪ್​ ಅವರು ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿನ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಬಂದು ತಮ್ಮ ಹೇಳಿಕೆ ದಾಖಲಿಸಿದ್ದರು. ಆ ವೇಳೆ ಏನೆಲ್ಲ ನಡೆಯಿತು ಎಂಬುದನ್ನು ಮಾಧ್ಯಮಗಳ ಎದುರು ಸುದೀಪ್​ ಪರ ಲಾಯರ್​ ವಿವರಿಸಿದ್ದಾರೆ. ‘ಕಾನೂನಿನ ಪ್ರಕಾರವಾಗಿ ಸುದೀಪ್​ ಅವರು ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಿದ್ದಾರೆ. ಮಾನಹಾನಿ ಆಗಿದ್ದಕ್ಕೆ ಸಾಕ್ಷಿಗಳನ್ನು ಸಲ್ಲಿಸಿದ್ದಾರೆ. ಈ ಹಂತದಲ್ಲಿ ರಾಜಿಗೆ ಯಾವುದೇ ಅವಕಾಶ ಇಲ್ಲ’ ಎಂದು ಸುದೀಪ್​ ಪರ ವಕೀಲರು ಹೇಳಿದ್ದರು.

ಎಂ.ಎನ್​. ಕುಮಾರ್​ ನಡುವಿನ ಜಟಾಪಟಿಯಲ್ಲಿ ರಾಜಿ ಮಾಡಿಕೊಳ್ಳಲು ಸುದೀಪ್​ ಸಿದ್ಧರಿಲ್ಲ. ಸಂಧಾನ ನಡೆಸುವ ಉದ್ದೇಶದಿಂದ ರವಿಚಂದ್ರನ್​ ಮತ್ತು ಶಿವರಾಜ್​ಕುಮಾರ್​ ಅವರ ಮಧ್ಯಸ್ಥಿಕೆಯಲ್ಲಿ ಮಾತುಕಥೆ ನಡೆದಿತ್ತು. ಅದರಲ್ಲಿ ಸುದೀಪ್​ ಕೂಡ ಭಾಗಿ ಆಗಿದ್ದರು. ಆದರೆ ಕೋರ್ಟ್​ನ ಹೊರಗೆ ಸಂಧಾನ ಮಾಡಿಕೊಳ್ಳಲು ಸುದೀಪ್​ ಒಪ್ಪಿಕೊಂಡಿಲ್ಲ. ಹಾಗಾಗಿ ಅವರು ಕಾನೂನಿ ಹಾದಿ ಹಿಡಿದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ