Mysore
27
light rain

Social Media

ಶನಿವಾರ, 01 ಆಗಸ್ಟ್ 2026
Light
Dark

ಚಂದ್ರನಯಾನ -3 : ಲ್ಯಾಂಡರ್ ಸೆರೆಹಿಡಿದ ಫೋಟೋ ಹಂಚಿಕೊಂಡ ಇಸ್ರೋ

ನವದೆಹಲಿ : ಚಂದ್ರನ ಅಂಗಳಕ್ಕೆ ಕಳುಹಿಸಿರುವ ಚಂದ್ರಯಾನ-3 ಲ್ಯಾಂಡರ್ ಸೆರೆಹಿಡಿದ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಚಿತ್ರಗಳಲ್ಲಿ ಚಂದ್ರನ ಮೇಲ್ಮೈನ ಕುಳಿಗಳಾದ ಅರಿಸ್ಟಾರ್ಕಸ್, ಎಡಿಂಗ್ಟನ್ ಮತ್ತು ಪೈಥಾಗರಸ್ ಸೆರೆಯಾಗಿದೆ. ಅಲ್ಲದೇ ಚಂದ್ರನ ಮೇಲಿರುವ ಕಪ್ಪು ಬಯಲು ಪ್ರದೇಶ ಓಷಿಯನಸ್ ಪ್ರೋಸೆಲ್ಲಾರಮ್ ಪ್ರದೇಶ ಕೂಡ ಸ್ಪಷ್ಟವಾಗಿ ಕಾಣಿಸುತ್ತದೆ. ಹಂಚಿಕೊಳ್ಳಲಾದ ಫೋಟೋಗಳಲ್ಲಿ ಜುಲೈ 14ರಂದು ತೆಗೆಯಲಾದ ಭೂಮಿಯ ಚಿತ್ರವೂ ಸೇರಿದೆ.

ಆಗಸ್ಟ್ 5 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತ್ತು. ಈಗ ನೌಕೆಯು ಚಂದ್ರನ ಮೇಲೆ ಇಳಿಯಲು ಕೇವಲ ಹದಿನೈದು ದಿನಗಳು ಮಾತ್ರ ಉಳಿದಿವೆ. ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಚಂದ್ರನ ಹತ್ತಿರಕ್ಕೆ ತೆಗೆದುಕೊಂಡು ಹೋಗಲು ಮತ್ತು ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಲ್ಯಾಂಡರ್ (ವಿಕ್ರಮ್) ಅನೇಕ ತಂತ್ರಗಳನ್ನು ನಿರ್ವಹಿಸಲಿದೆ.

ಬುಧವಾರ ಚಂದ್ರನ ಮೇಲ್ಮೈನ 1437 ಕಿಮೀ ವೃತ್ತದ ಕಕ್ಷೆಯಿಂದ 174 ಕಿಮೀಗೆ ಇಳಿಸಲಾಗಿದೆ. ಚಂದ್ರನ ಮೇಲೆ ಲ್ಯಾಂಡ್‌ ಆಗುವುದಕ್ಕೆ ಇನ್ನು 1437 ಕಿ.ಮೀ. ಅಷ್ಟೇ ಕ್ರಮಿಸಬೇಕಿದೆ. ಮುಂದಿನ ಕಾರ್ಯಾಚರಣೆಯನ್ನು ಆಗಸ್ಟ್ 14 ರಂದು 11:30 ಮತ್ತು 12:30 ಗಂಟೆಗಳ ನಡುವೆ ನಿಗದಿಪಡಿಸಲಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!