Mysore
24
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಬಿಜೆಪಿಯವರು ಭಾರತ ಮಾತೆಯ ಹಂತಕರು : ರಾಹುಲ್ ಗಾಂಧಿ

ನವದೆಹಲಿ : ಬಿಜೆಪಿಯವರು ಭಾರತ ಮಾತೆಯ ಹಂತಕರು. ಮಣಿಪುರ ಎರಡು ಹೋಳಾಗಿದೆ. ಸರ್ಕಾರದ ರಾಜಕೀಯ ಮಣಿಪುರದಲ್ಲಿ ಭಾರತವನ್ನು ಕೊಲೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿರೀಕ್ಷೆಯಂತೆ ಬಿಜೆಪಿಯನ್ನು ಟೀಕಿಸುವ ಮೂಲಕ ಭಾಷಣ ಆರಂಭಿಸಿದರು,ನೀವು (ಬಿಜೆಪಿ) ಇಂದು ಭಯಪಡುವ ಅಗತ್ಯವಿಲ್ಲ, ನನ್ನ ಭಾಷಣವು ಅದಾನಿ ವಿಷಯದ ಬಗ್ಗೆ ಅಲ್ಲ. ಮಣಿಪುರದ ಜನರನ್ನು ಕೊಲ್ಲುವ ಮೂಲಕ, ನೀವು ಭಾರತ ಮಾತೆಯ ಹಂತಕರಾಗಿದ್ದೀರಿ. ನೀವು ದೇಶದ್ರೋಹಿಗಳು, ದೇಶಭಕ್ತರಲ್ಲ ಎಂದು ಕಿಡಿ ಕಾರಿದರು.

ಭಾರತ ಒಂದು ಧ್ವನಿ, ಭಾರತ ನಮ್ಮ ಜನರ ಧ್ವನಿ, ಹೃದಯದ ದನಿ . ಆ ದನಿಯನ್ನು ನೀವು ಮಣಿಪುರದಲ್ಲಿ ಹತ್ಯೆ ಮಾಡಿದ್ದೀರಿ, ಇದರರ್ಥ ನೀವು ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆ ಮಾಡಿದ್ದೀರಿ. ಮಣಿಪುರದಲ್ಲಿನ ಜನರನ್ನು ಹತ್ಯೆ ಮಾಡುವ ಮೂಲಕ ನೀವು ಭಾರತವನ್ನು ಕೊಂದಿದ್ದೀರಿ. ನೀವು ದೇಶಪ್ರೇಮಿಗಳಲ್ಲ,ದೇಶದ್ರೋಹಿಗಳು ಎಂದು ರಾಹುಲ್ ಗುಡುಗಿದರು.

ಕೆಲವು ದಿನಗಳ ಹಿಂದೆ ನಾನು ಮಣಿಪುರಕ್ಕೆ ಹೋಗಿದ್ದೆ, ಇಲ್ಲಿವರೆಗೆ ನಮ್ಮ ಪ್ರಧಾನಿ ಹೋಗಿಲ್ಲ, ಏಕೆಂದರೆ ಅವರಿಗೆ ಮಣಿಪುರ ಭಾರತವಲ್ಲ, ನಾನು ಮಣಿಪುರ ಎಂಬ ಪದವನ್ನು ಬಳಸಿದ್ದೇನೆ ಆದರೆ ಅದು ಮಣಿಪುರವಾಗಿ ಉಳಿದಿಲ್ಲ ಎಂಬುದು ಸತ್ಯ .ನೀವು ಮಣಿಪುರವನ್ನು ಎರಡಾಗಿ ಮಾಡಿದ್ದೀರಿ, ನೀವು ಮಣಿಪುರವನ್ನು ಒಡೆದು ಹಾಕಿದ್ದೀರಿ ಎಂದು ಆರೋಪಿಸಿದರು. ಭಾರತ್ ಜೋಡೋ ಯಾತ್ರೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಪ್ರಯಾಣ ಇನ್ನೂ ಮುಗಿದಿಲ್ಲ. ಅದು ಇನ್ನೂ ಚಾಲನೆಯಲ್ಲಿದೆ.ನೀವು ಯಾತ್ರೆಯನ್ನು (ಭಾರತ್ ಜೋಡೋ ಯಾತ್ರೆ) ಏಕೆ ಪ್ರಾರಂಭಿಸಿದ್ದೀರಿ ಎಂದು ಜನರು ನನ್ನನ್ನು ಕೇಳುತ್ತಿದ್ದರು. ನಾನು ಯಾಕೆ ಯಾತ್ರೆ ಆರಂಭಿಸಿದೆ ಎಂಬುದು ನನಗೇ ಗೊತ್ತಿಲ್ಲ. ಆದರೆ ಆ ಪ್ರಯಾಣದಲ್ಲಿ ಜನರ ನೋವು, ಸಂಕಟ, ಸಮಸ್ಯೆಗಳು ನನ್ನದೇ ಸಮಸ್ಯೆಗಳಾದವು. ಯಾತ್ರೆಯ ವೇಳೆ ನನ್ನಲ್ಲಿದ್ದ ಅಹಂಕಾರದ ಭಾವನೆ ಮಾಯವಾಯಿತು ಎಂದರು.

ಮಣಿಪುರದ ವಿಚಾರವಾಗಿ ಪ್ರಧಾನಿ ನರೇಂದ್ರ . ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ರಾಷ್ಟ್ರದ ಧ್ವನಿಯನ್ನು ಕೇಳಲು, ನಾವು ದುರಹಂಕಾರ ಮತ್ತು ದ್ವೇಷವನ್ನು ತ್ಯಜಿಸಬೇಕಾಗುತ್ತದೆ. ಹಿಂಸಾಚಾರ ಪೀಡಿತ ಮಣಿಪುರಕ್ಕೆ ನಮ್ಮ ಪ್ರಧಾನಿ ಮೋದಿ ಭೇಟಿ ನೀಡಿಲ್ಲ. ಅವರಿಗೆ ಮಣಿಪುರ ಭಾರತದ ಭಾಗವಲ್ಲ ಎಂದು ಇದೇ ವೇಳೆ ಹರಿಹಾಯ್ದರು.

ನೀವು ಯಾತ್ರೆಯನ್ನು (ಭಾರತ್ ಜೋಡೋ ಯಾತ್ರೆ) ಏಕೆ ಆರಂಭಿಸಿದ್ದೀರಿ ಎಂದು ಜನರು ನನ್ನನ್ನು ಕೇಳುತ್ತಿದ್ದರು. ನಾನು ಈ ದೇಶವನ್ನು ಅರ್ಥಮಾಡಿಕೊಳ್ಳಲು ಯಾತ್ರೆಯನ್ನು ಪ್ರಾರಂಭಿಸಿದೆ ಎಂದು ಜನರಿಗೆ ಹೇಳುತ್ತಿದ್ದೆ. 10 ವರ್ಷಗಳಿಂದ ನನ್ನನ್ನು ಏಕೆ ನಿಂದಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಬಯಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದರು.
ನಾನು (ಯಾತ್ರೆ) ಪ್ರಾರಂಭಿಸಿದಾಗ, ನಾನು ಪ್ರತಿದಿನ 10 ಕಿಮೀ ಓಡಲು ಸಾಧ್ಯವಾದರೆ 25 ಕಿಮೀ ನಡೆಯುವುದು ದೊಡ್ಡ ವಿಷಯವಲ್ಲ ಎಂಬುದು ನನ್ನ ಮನಸ್ಸಿನಲ್ಲಿತ್ತು, ಇಂದು ನಾನು ಅದನ್ನು ನೋಡಿದಾಗ -ಅದು ದುರಹಂಕಾರವಾಗಿತ್ತು ಎಂಬುದು ಅರ್ಥವಾಗಿದೆ. ಆಗ ನನ್ನ ಹೃದಯದಲ್ಲಿ ದುರಹಂಕಾರವಿತ್ತು .ಆದರೆ ಭಾರತವು ದುರಹಂಕಾರವನ್ನು ಅಳಿಸಿಬಿಡುತ್ತದೆ, ಒಂದು ಸೆಕೆಂಡಿನಲ್ಲಿ ಅದು ಅಳಿಸಿಹಾಕುತ್ತದೆ. ಯಾತ್ರೆಯ 2-3 ದಿನಗಳಲ್ಲಿ ಮೊಣಕಾಲು ನೋಯಲಾರಂಭಿಸಿತು, ಅದು ಹಳೆಯ ಗಾಯವಾಗಿತ್ತು. ಮೊದಲ ದಿನಗಳಲ್ಲಿ ತೋಳ ಇರುವೆ ಆಗಿ ಬಿಟ್ಟಿತು.. ಜೋ ಹಿಂದೂಸ್ತಾನ್ ಕೋ ಅಹಂಕಾರ್ ಸೆ ದೇಖ್ನೆ ನಿಕ್ಲಾ ಥಾ, ವೋ ಪೂರಾ ಕಾ ಪೂರಾ ಅಹಂಕಾರ್ ಗಯಾಬ್ ಹೋ ಗಯಾ.. (ಅಹಂಕಾರದಿಂದ ದೇಶವನ್ನು ಸುತ್ತಲು ಹೋಗಿದ್ದವನ ಎಲ್ಲ ಅಹಂಕಾರ ಇಳಿದು ಹೋಯ್ತು).`ಭಾರತ ಜನರ ಧ್ವನಿ. ಈ ಧ್ವನಿಗಳನ್ನು ಆಲಿಸಲು, ನಾವು ನಮ್ಮ ಆಸೆಗಳನ್ನು ತ್ಯಾಗ ಮಾಡಬೇಕು. ನಮ್ಮ ಅಹಂ ಮತ್ತು ದ್ವೇಷವನ್ನು ಬಿಟ್ಟುಬಿಡಬೇಕು ಎಂದು ಬಿಜೆಪಿಗೆ ಎಚ್ಚರಿಕೆ ಕೊಟ್ಟರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ