Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಲ್ಲೇಶ್ವರಂ ಮನೆ ತಲುಪಿದ ಸ್ಪಂದನಾ ಮೃತದೇಹ

ಬೆಂಗಳೂರು : ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹ ತಡರಾತ್ರಿ 1 ಗಂಟೆ ವೇಳೆಗೆ ಮಲ್ಲೇಶ್ವರಂನ ತವರು ಮನೆ ತಲುಪಿದೆ. ಸಾವಿನಿಂದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಗಣ್ಯರು, ಆಪ್ತರು, ಸ್ನೇಹಿತರು ಹಾಗೂ ಸಿನಿ ತಾರೆಯರು ಕಂಬನಿ ಮಿಡಿದಿದ್ದಾರೆ. ಮೃತದೇಹ ನೋಡುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.

ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಸ್ಪಂದನಾ ಸ್ನೇಹಿತೆ ನಟಿ ಅನು ಪ್ರಭಾಕರ್‌ ಸೇರಿದಂತೆ ಹಲವು ಗಣ್ಯಮಾನ್ಯರು ಮಲ್ಲೇಶ್ವರಂನ ಮನೆಗೆ ಆಗಮಿಸಿದ್ದಾರೆ. ನಟ ವಿಜಯರಾಘವೇಂದ್ರ, ಶ್ರೀಮುರಳಿ, ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್‌, ಶಾಸಕ ಮುನಿರತ್ನ, ಮಾವ ಚಿನ್ನೇಗೌಡ ಹಲವು ಪ್ರಮುಖರು ಸ್ಥಳದಲ್ಲಿದ್ದಾರೆ. ಅಂಬುಲೆನ್ಸ್‌ ಮಲ್ಲೇಶ್ವರಂನ ತವರು ಮನೆ ತಲುಪುತ್ತಿದ್ದಂತೆ ಮೃತದೇಹ ನೋಡಲು ನೆರೆದಿದ್ದ ಜನ ಮುಗಿಬಿದ್ದರು. ಅಂಬುಲೆನ್ಸ್‌ ಬಳಿ ತಳ್ಳಾಟ, ನೂಕಾಟ ನಡೆಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ