Mysore
31
broken clouds

Social Media

ಸೋಮವಾರ, 15 ಜೂನ್ 2026
Light
Dark

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿಧನ

ಬೆಂಗಳೂರು : ಸ್ಯಾಂಡಲ್‌ವುಡ್ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ನಿಧನರಾಗಿದ್ದಾರೆ. ಹೃದಯಾಘಾತದಿಂದ ಸ್ಪಂದನ ಇಹಲೋಕ ತ್ಯಜಿಸಿದ್ದಾರೆ.

ವಿಜಯ್‌ ಪತ್ನಿ ಸ್ಪಂದನ ಅವರು ಇತ್ತೀಚಿಗೆ ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದರು ಪ್ರವಾಸದಲ್ಲಿರುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನದ ಶಾಕ್‌ನಿಂದ ಹೊರ ಬಂದಾಗಲೇ ಮತ್ತೊಂದು ಸಾವು ಅವರ ಕುಟುಂಬಕ್ಕೆ ಶಾಕ್‌ ನೀಡಿದೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ವಿಜಯ್‌ ಪತ್ನಿ ಸ್ಪಂದನ ವಿಧಿವಶರಾಗಿದ್ದಾರೆ.

ನಾಳೆ ಬೆಂಗಳೂರಿಗೆ ವಿಜಯ್‌ ಪತ್ನಿ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ. ನಿವೃತ್ತ ಅಸಿಸ್ಟೆಂಟ್‌ ಪೊಲೀಸ್‌ ಆಫೀಸರ್‌ ಬಿ.ಕೆ ಶಿವರಾಮ್‌ ಅವರ ಪುತ್ರಿ ಸ್ಪಂದನ ಅವರು ವಿಜಯ್‌ ಹಲವು ವರ್ಷಗಳಿಂದ ಪ್ರೀತಿಸಿ, 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿಗೆ ಒಬ್ಬ ಮಗನಿದ್ದಾನೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!