Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸ್ಟಾರ್ಟ್‌ ಮಾಡುತ್ತಿದ್ದಂತೆ ಹೊತ್ತಿ ಉರಿದ ಎಲೆಕ್ಟ್ರಿಕ್​​ ಬೈಕ್

ಚಾಮರಾಜನಗರ : ಚಾರ್ಜ್​ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್​​ ಬೈಕ್ ಸ್ಟಾರ್ಟ್ ಮಾಡುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಧಗಧಗನೇ ಹೊತ್ತಿ ಉರಿದಿರುವ ಘಟನೆ ಚಾಮರಾಜನಗರ ತಾಲೂಕಿನ‌ ಕೊತ್ತಲವಾಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ‌. ಕೊತ್ತಲವಾಡಿ ಗ್ರಾಮದ ಬಸವರಾಜಪ್ಪ ಎಂಬುವರಿಗೆ ಸೇರಿದ ಬೈಕ್ ಇದಾಗಿದ್ದು, ಚಾರ್ಜ್ ಆದ ಬಳಿಕ ಬೈಕ್​​ ಸ್ಟಾರ್ಟ್ ಮಾಡಿದ ವೇಳೆ ಹೊಗೆ ಕಾಣಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಹೊಗೆ ಕಂಡು ಆತಂಕದಿಂದ ಹಿಂದೆ ಸರಿದಿದ್ದು, ಕ್ಷಣಾರ್ಧದಲ್ಲೇ ದಿಢೀರ್​​ ಬೆಂಕಿಯ ಜ್ವಾಲೆ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಪಕ್ಕದಲ್ಲೇ ನಿಲ್ಲಿಸಿದ್ದ ಮತ್ತೊಂದು ಬೈಕ್​ ಹಾಗೂ ಮನೆಗೆ ಬೆಂಕಿ ವ್ಯಾಪಿಸಿಲ್ಲ. ಕೂಡಲೇ, ಕೆಲ ಯುವಕರು ಸೇರಿ ಉರಿಯುತ್ತಿದ್ದ ಬೈಕ್​​ಗೆ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ