Mysore
28
scattered clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಚೆನ್ನೈ| ಬೈಕ್‌ ರೇಸಿಂಗ್‌ ಪಂದ್ಯಾವಳಿಯಲ್ಲಿ ಅಪಘಾತ: 13 ವರ್ಷದ ರೈಡರ್‌ ಸಾವು!

ಚೆನ್ನೈ: ಬೆಂಗಳೂರು ಮೂಲದ 13 ವರ್ಷದ ಯುವ ಬೈಕರ್‌ ಶ್ರೇಯಸ್ ಹರೀಶ್ ಮೋಟಾರ್‌ಸೈಕಲ್ ರೇಸಿಂಗ್ ವೇಳೆ ಭಾರೀ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.

ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಶನಿವಾರ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನಲ್ಲಿ ಬೆಂಗಳೂರಿನ ಬೈಕರ್‌ ಶ್ರೇಯಸ್ ಹರೀಶ್ ಕೂಡಾ ಅವರು ಭಾಗವಹಿಸಿದ್ದರು. ರೇಸಿಂಗ್‌ ವೇಳೆಯಲ್ಲಿ ಅಪಘಾತವಾಗಿ ತಲೆ ಬಲವಾದ ಪೆಟ್ಟುಬಿದ್ದು ಗಾಯಗೊಂಡಿದ್ದರು.

ಘಟನೆಯ ನಂತರ ರೇಸ್‌ಗೆ ತಕ್ಷಣವೇ ಕೆಂಪು ಧ್ವಜ ಹಾಕಲಾಯಿತು. ಟ್ರ್ಯಾಕ್‌ನಲ್ಲಿ ಇರಿಸಲಾಗಿದ್ದ ಟ್ರಾಮಾ ಕೇರ್ ಆಂಬ್ಯುಲೆನ್ಸ್‌ನಲ್ಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ನೀಡಿತ್ತಾದರೂ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದರು.

ದುರಂತದಿಂದ ಎಲ್ಲಾ ರೇಸ್‌ಗಳು ರದ್ದು : ಬಾಲಕನ ದುರಂತ ಘಟನೆಯ ನಂತರ, ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶನಿವಾರ ಮತ್ತು ಭಾನುವಾರದಂದು ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಿದೆ.

ಯಾರಿದು ಶ್ರೇಯಸ್‌ ಹರೀಶ್‌? : ಬೆಂಗಳೂರಿನ ಖಾಸಗಿ ಶಾಲೆಯ ವಿದ್ಯಾರ್ಥಿ ಶ್ರೇಯಸ್. ಜುಲೈ 26, 2010 ರಂದು ಜನಿಸಿದ್ದರು. ಈ ಹಿಂದೆ ಹಲವು ರಾಷ್ಟ್ರಮಟ್ಟದ ಮೋಟರ್‌ ಸೈಕಲ್‌ ಸ್ಪರ್ಧಿಸಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸತತ ನಾಲ್ಕು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ರೇಸ್‌ಗಳನ್ನು ಗೆದಿದ್ದು, ಈ ಮೂಲಕ ಬೈಕ್‌ ರೇಸಿಂಗ್‌ನ ಉದಯೋನ್ಮುಖ ತಾರೆ ಎಂದು ಪ್ರಶಂಸಿಸಲ್ಪಟ್ಟಿದ್ದರು.

ಈ ವರ್ಷದ ಮೇನಲ್ಲಿ ಮಿನಿಜಿಪಿ ಇಂಡಿಯಾ ಪ್ರಶಸ್ತಿಯನ್ನು ಗೆದ್ದ ಶ್ರೇಯಸ್, ಸ್ಪೇನ್‌ನಲ್ಲಿ ನಡೆದ ಮಿನಿಜಿಪಿ ರೇಸ್‌ಗಳಲ್ಲಿ ಭಾಗವಹಿಸಿದ್ದರು, ಎರಡೂ ರೇಸ್‌ಗಳನ್ನು ಕ್ರಮವಾಗಿ ಐದು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡಿದ್ದರು. ಇನ್ನು ಪ್ರಸಕ್ತ ಆಗಸ್ಟ್‌ನಲ್ಲಿ ಮಲೇಷ್ಯಾದ ಸೆಪಾಂಗ್ ಸರ್ಕ್ಯೂಟ್‌ನಲ್ಲಿ ಎಂಎಸ್‌ಬಿಕೆ ಚಾಂಪಿಯನ್‌ಶಿಪ್ 2023 ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದರು. ಅಷ್ಟರಲ್ಲೆ ಈ ದುರಂತ ಸಂಭವಿಸಿದೆ.

ಶ್ರೇಯಸ್‌ ಸಾವು ದೊಡ್ಡ ನಷ್ಟ : ಇಷ್ಟು ಯುವ ಮತ್ತು ಪ್ರತಿಭಾವಂತ ರೈಡರ್ ಅನ್ನು ಕಳೆದುಕೊಂಡಿರುವುದು ದುರಂತ. ತನ್ನ ಅದ್ಭುತ ರೇಸಿಂಗ್ ಪ್ರತಿಭೆಯಿಂದ ಹೊಸ ಅಲೆಗಳನ್ನು ಎಬ್ಬಿಸುತ್ತಿದ್ದ ಶ್ರೇಯಸ್‌ ಮೃತಪಟ್ಟಿರುವುದು ದೊಡ್ಡ ನಷ್ಟ . ಘಟನೆಯಿಂದ ಈ ವಾರಾಂತ್ಯದ ಉಳಿದ ಕಾರ್ಯಕ್ರಮವನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಎಂಎಂಎಸ್‌ಸಿ ಅಧ್ಯಕ್ಷ ಅಜಿತ್ ಥಾಮಸ್ ಹೇಳಿದ್ದಾರೆ.

ಈ ವರ್ಷ ಮೋಟಾರ್‌ ರೇಸ್‌ ಕ್ರೀಡೆಯಲ್ಲಿ ಎರಡನೇ ಸಾವು : 2023 ವರ್ಷ ಭಾರತೀಯ ಮೋಟಾರ್‌ಸ್ಪೋರ್ಟ್‌ನಲ್ಲಿ ಇದು ಎರಡನೇ ಸಾವು. ಜನವರಿಯಲ್ಲಿ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದ MRF MMSC FMSCI ಇಂಡಿಯನ್ ನ್ಯಾಷನಲ್ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ 2022 ರ ಎರಡನೇ ಸುತ್ತಿನಲ್ಲಿ ಅಪಘಾತಕ್ಕೀಡಾದ ನಂತರ, ಹೆಸರಾಂತ ಮತ್ತು ಗೌರವಾನ್ವಿತ ರೇಸರ್ ಕೆಇ ಕುಮಾರ್ (59) ನಿಧನರಾಗಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!