Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಶಾರುಖ್​ ಖಾನ್​ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಅವರು ಅಲ್ಲಿನ ಸ್ಟಾರ್​ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.

ನಟ ಶಾರುಖ್​ ಖಾನ್​ ಅವರು ಜವಾನ್​ ಸಿನಿಮಾದ ಬಿಡುಗಡೆಗೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಅವರು ಈಗ ಯಶಸ್ಸಿನ ಟ್ರ್ಯಾಕ್​ನಲ್ಲಿ ಇದ್ದಾರೆ. ಪಠಾಣ್​ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರಿಗೆ ಇದ್ದ ಬೇಡಿಕೆ ಹೆಚ್ಚಾಗಿದೆ.

ಅವರ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ನಿರ್ಮಾಪಕರು ಕಾಯುತ್ತಿದ್ದಾರೆ. ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಳ್ಳಬೇಕು ಎಂಬುದು ಬಹುತೇಕ ಎಲ್ಲ ನಟಿಯರ ಆಸೆ ಆಗಿರುತ್ತದೆ. ಈಗ ರಶ್ಮಿಕಾ ಮಂದಣ್ಣ ಅವರಿಗೆ ಅಂಥ ಅವಕಾಶ ಸಿಕ್ಕಿದೆ. ಆದರೆ ಇದು ಸಿನಿಮಾದಲ್ಲಿ ಅಲ್ಲ. ಬದಲಿಗೆ, ಜಾಹೀರಾತಿನಲ್ಲಿ ಶಾರುಖ್​ ಖಾನ್​ ಮತ್ತು ರಶ್ಮಿಕಾ ಮಂದಣ್ಣ ಅವರು ಸ್ಕ್ರೀನ್​ ಶೇರ್​ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದು ರಶ್ಮಿಕಾ ಅಭಿಮಾನಿಗಳಿಗೆ ಖುಷಿ ನೀಡಿದೆ.

ಯಶ್​ ರಾಜ್​ ಸ್ಟುಡಿಯೋದಲ್ಲಿ ಈ ಜಾಹೀರಾತಿನ ಶೂಟಿಂಗ್​ ನಡೆದಿದೆ. ರಶ್ಮಿಕಾ ಮಂದಣ್ಣ ಮತ್ತು ಶಾರುಖ್​ ಖಾನ್​ ಅವರು ಜೊತೆಯಾಗಿ ಇದರಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ಈ ಜಾಹೀರಾತು ಬಿತ್ತರ ಆಗಲಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಅವರು ವಿಕ್ಕಿ ಕೌಶಲ್​ ಜೊತೆ ಒಂದು ಜಾಹೀರಾತಿನಲ್ಲಿ ನಟಿಸಿದ್ದರು. ಅದರ ಕಾನ್ಸೆಪ್ಟ್​ ಆಕ್ಷೇಪಾರ್ಹವಾಗಿದೆ ಎಂದು ನೆಟ್ಟಿಗರು ತಕರಾರು ತೆಗೆದಿದ್ದರು. ಈಗ ಶಾರುಖ್​ ಜೊತೆ ರಶ್ಮಿಕಾ ನಟಿಸಿದ ಜಾಹೀರಾತು ಹೇಗಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ರಶ್ಮಿಕಾ ಮಂದಣ್ಣ ಅವರಿಗೆ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಅವರು ಅಲ್ಲಿನ ಸ್ಟಾರ್​ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಮಿತಾಭ್​ ಬಚ್ಚನ್​ ಜೊತೆ ಗುಡ್​ ಬೈ ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಮಿಷನ್​ ಮಜ್ನು ಚಿತ್ರದಲ್ಲಿ ಸಿದ್ದಾರ್ಥ್​ ಮಲ್ಹೋತ್ರಾಗೆ ಜೋಡಿಯಾಗಿದ್ದ ರಶ್ಮಿಕಾ ಅವರು, ಅನಿಮಲ್​ ಸಿನಿಮಾದಲ್ಲಿ ರಣಬೀರ್​ ಕಪೂರ್​ ಜೊತೆ ನಟಿಸಿದ್ದಾರೆ. ಆ ಸಿನಿಮಾ ಡಿಸೆಂಬರ್​ 1ರಂದು ಬಿಡುಗಡೆ ಆಗಲಿದೆ.

ಶಾರುಖ್​ ಖಾನ್​ ನಟನೆಯ ಜವಾನ್​ ಸಿನಿಮಾ ಸೆಪ್ಟೆಂಬರ್​ 7ರಂದು ಬಿಡುಗಡೆ ಆಗಲಿದೆ. ಆ ಸಿನಿಮಾ ಮೇಲೆ ಅಭಿಮಾನಿಗಳ ಸಖತ್​ ಭರವಸೆ ಇದೆ. ನಯನತಾರಾ, ವಿಜಯ್​ ಸೇತುಪತಿ, ದೀಪಿಕಾ ಪಡುಕೋಣೆ ಮುಂತಾದ ಘಟಾನುಘಟಿಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪ್ರಿವ್ಯೂ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಜವಾನ್​ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ರೆಡ್​ ಚಿಲ್ಲೀಸ್​ ಎಂಟರ್​ಟೇನ್ಮೆಂಟ್​ ಮೂಲಕ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಆಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ