Mysore
17
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಆನ್​​ಲೈನ್​ ಮೂಲಕ ಹೆಚ್​ ವಿಶ್ವನಾಥ್ ಪುತ್ರನಿಗೆ ವಂಚನೆ

ಮೈಸೂರು : ಆನ್​ಲೈನ್​ ವಂಚನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಎಷ್ಟೇ ವಂಚನೆ ಪ್ರಕರಣಗಳು ಬೆಳಕಿಗೆ ಬಂದರೂ, ಜನಸಾಮಾನ್ಯರು ಮಾತ್ರ ಇಂತಹವರ ಬಲೆಗೆ ಬೀಳುವುದು ಮಾತ್ರ ತಪ್ಪುತ್ತಿಲ್ಲ. ಮುಖ್ಯವಾಗಿ ಶಿಕ್ಷಣವಂತರೇ ಇಂತಹವರ ಗಾಳಕ್ಕೆ ಬಿದ್ದು, ಹಣ ಕಳೆದುಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ಆನ್‌ಲೈನ್ ವಂಚನೆಯ ಜಾಲಕ್ಕೆ ಎಂಎಲ್‌ಸಿ ಎಚ್ ವಿಶ್ವನಾಥ್ ಪುತ್ರ ಅಮಿತ್ ಬಿದ್ದು, ಬರೊಬ್ಬರಿ 1.99 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ. ಬಳಿಕ ಘಟನೆ ಸೈಬರ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ.

ಘಟನೆ ವಿವರ : ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ಅವರು ಹಣ ಡ್ರಾ ಮಾಡಲು ಎಟಿಎಂಗೆ ಹೋಗಿದ್ದಾರೆ. ಈ ವೇಳೆ ಹಣ ಬಾರದ ಹಿನ್ನೆಲೆ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಕರೆ ಮಾಡಿದ್ದಾರೆ. ನಂತರ ಕರೆ ಸ್ವೀಕರಿಸಿದ ಅಪರಿಚಿತ ವ್ಯಕ್ತಿ, ಬ್ಯಾಂಕ್ ಖಾತೆ ಬಗ್ಗೆ ವಿವರ ಪಡೆದು, ಅವರ ಖಾತೆಯಿಂದ 1.99 ಲಕ್ಷ ಹಣ ಲಪಟಾಯಿಸಿದ್ದಾನೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!