ಮುಂಬೈ : ಅಮರನಾಥ ಯಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್‍ಗೆ ಮತ್ತೊಂದು ಬಸ್ ಡಿಕ್ಕಿಯಾಗಿ ಐವರು ಮೃತಪಟ್ಟಿದ್ದು, 20 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಬುಲ್ಧಾನಾದಲ್ಲಿ ನಡೆದಿದೆ.
ಮಲ್ಕಾಪುರ ಪ್ರದೇಶದ ನಂದೂರ್ ನಾಕಾ ಮೇಲ್ಸೇತುವೆಯಲ್ಲಿ ಎನ್‍ಎಚ್ 53 ತಡರಾತ್ರಿ 2:30ರ ಸುಮಾರಿಗೆ ಎರಡು ಬಸ್‍ಗಳ ಡಿಕ್ಕಿಯಾಗಿದೆ. ಇದರಿಂದಾಗಿ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಂದು ಬಸ್‍ನಲ್ಲಿ ಅಮರನಾಥ ಯಾತ್ರೆ ಮುಗಿಸಿ ಪ್ರಯಾಣಿಕರು ಹಿಂಗೋಲಿ ಜಿಲ್ಲೆಗೆ ಮರಳುತ್ತಿದ್ದರು. ಇನ್ನೊಂದು ಬಸ್ ನಾಸಿಕ್ ಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿರುವ ಸುಮಾರು 20 ಮಂದಿಯನ್ನು ಬುಲ್ಧಾನಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ರಸ್ತೆ ಕೆಲವು ಗಂಟೆಗಳ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಬಳಿಕ ಪೊಲೀಸರು ಬಸ್‍ಗಳನ್ನು ತೆರವುಗೊಳಿಸಿದ ನಂತರ ಸಂಚಾರಕ್ಕೆ ಅವಕಾಶ ನೀಡಲಾಯಿತು.
ಇತ್ತೀಚಿಗೆ ಬುಲ್ಧಾನಾ ಜಿಲ್ಲೆಯಲ್ಲಿ ನಡೆದ ಎರಡನೇ ದೊಡ್ಡ ಬಸ್ ಅಪಘಾತ ಇದಾಗಿದೆ. ಜು.1 ರಂದು ಜಿಲ್ಲೆಯ ಸಮೃದ್ಧಿ-ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಅಪಘಾತದ ಬಳಿಕ ಬಸ್‍ಗೆ ಬೆಂಕಿ ಹೊತ್ತಿಕೊಂಡಿತ್ತು. ಇದರಲ್ಲಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ 25 ಜನರು ಸುಟ್ಟು ಹೋಗಿದ್ದರು. ಅಲ್ಲದೇ 8 ಜನರು ಗಾಯಗೊಂಡಿದ್ದರು.