Mysore
24
broken clouds

Social Media

ಶುಕ್ರವಾರ, 21 ಆಗಸ್ಟ್ 2026
Light
Dark

ಉರುಳಿಗೆ ಸಿಲುಕಿ ಹೆಣ್ಣು ಚಿರತೆ ಸಾವು: ಮಾಲೀಕನ ವಿರುದ್ಧ ಪ್ರಕರಣ ದಾಖಲು

ಎಚ್.ಡಿ.ಕೋಟೆ: ರೈತರ ಜಮೀನಿನಲ್ಲಿ ಉರುಳಿಗೆ ಸಿಲುಕಿ ಹೆಣ್ಣು ಚಿರತೆ ಸಾವನ್ನಪ್ಪಿರುವ ಘಟನೆ ಎಚ್ ಡಿ ಕೋಟೆ ಪಟ್ಟಣ ಸಮೀಪದ ಹೆಗಡಾಪುರ ಗ್ರಾಮದ ಬಳಿ ನಡೆದಿದೆ.

ಹೆಗಡಾಪುರ ಗ್ರಾಮದ ಸಮೀಪದಲ್ಲಿರುವ ದೇವ ನಾಯಕ ರವರ ಜಮೀನಿನಲ್ಲಿ ಬೇಟೆ ಮಾಡಲು ಹಾಕಲಾಗಿದ್ದ ಉರುಳಿಗೆ ನೆನ್ನೆ ರಾತ್ರಿ ಎರಡು ವರ್ಷದ ಹೆಣ್ಣು ಚಿರತೆ ಸಿಲುಕಿಕೊಂಡು ಸಾವನಪ್ಪಿದೆ.

ಇಂದು ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ವಿಚಾರ ತಿಳಿಯುತ್ತಿದ್ದಂತೆ ಬಿ ಎಫ್ ಓ ಬಸವರಾಜು ,ಎಸಿಎಫ್ ಲಕ್ಷ್ಮಿಕಾಂತ್ , ಆರ್ ಎಫ್ ಪ್ರಸನ್ನ ಕುಮಾರ್ ಅವರು ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಮೃತ ಚಿರತೆಯನ್ನು ಪಟ್ಟಣದ ಅರಣ್ಯ ಕಚೇರಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!