Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಪ್ರಾಜೆಕ್ಟ್ ಕೆ ಫಸ್ಟ್ ಲುಕ್ ರಿಲೀಸ್‌ : ಪ್ರಭಾಸ್‌ ಫ್ಯಾನ್ಸ್‌ ಗೆ ಮತ್ತೆ ನಿರಾಸೆ

ದುಬಾರಿ ಬಜೆಟ್ ನಲ್ಲಿ ರೆಡಿ ಆಗುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾದ ಪ್ರಭಾಸ್ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಸಿನಿಮಾ ತಂಡ ಬಿಲ್ಡ್ ಅಪ್ ಕೊಟ್ಟಂತೆ, ಅಚ್ಚರಿಯೊಂದು ಅಭಿಮಾನಿಗಳಿಗೆ ಕಾದಿದೆ ಎಂದೇ ಹೇಳಲಾಗಿತ್ತು. ಆದರೆ, ಯಾವುದೇ ಅಚ್ಚರಿ ಮೂಡಿಸದೇ ನಿರಾಸೆ ಮಾಡಿದೆ ಚಿತ್ರತಂಡ. ಪ್ರಭಾಸ್ ಅವರ ಮಾಮೂಲು ಲುಕ್ ಇರುವಂತಹ ಫಸ್ಟ್ ಲುಕ್ ಅದಾಗಿದೆ.

ಈ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಪ್ರಭಾಸ್ ಜೊತೆ ಕಮಲ್ ಹಾಸನ್, ರಾಣಾ ದಗ್ಗುಬಾಟಿ ಈಗಾಗಲೇ ಅಮೆರಿಕಾಗೆ ಪ್ರವಾಸ ಬೆಳೆಸಿದ್ದಾರೆ. ಸುಮಾರು 600 ಕೋಟಿಗೂ ಅಧಿಕ ಬಜೆಟ್ ನಲ್ಲಿ ಈ ಸಿನಿಮಾ ತಯಾರಾಗಲಿದ್ದು, ಅನೇಕ ದಿಗ್ಗಜ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾದ ಫಸ್ಟ್ ಲುಕ್ ಬೇರೆ ಹಂತದಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಪಠಾಣ್ ಚಿತ್ರದ ಸೂಪರ್ ಸಕ್ಸಸ್‌ನಲ್ಲಿರುವ ದೀಪಿಕಾ ಪಡುಕೋಣೆ ಈಗ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಸಿನಿಮಾಗೆ ಭರ್ಜರಿ ಸಂಭಾವನೆ ಪಡೆದಿದ್ದಾರೆ. ಪಠಾಣ್ ಸಿನಿಮಾ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಹಾಗಾಗಿ ಪ್ರಾಜೆಕ್ಟ್ ಕೆ ಚಿತ್ರಕ್ಕೆ ದುಬಾರಿ ಸಂಭಾವನೆಯನ್ನೇ ನಟಿ ಪಡೆದಿದ್ದಾರೆ.

ಈ ಸಿನಿಮಾಗಾಗಿ ಅವರು ದೊಡ್ಡ ಕಾಲ್‌ಶೀಟ್ ನೀಡಿದ್ದಾರೆ. ಹಲವು ದಿನಗಳನ್ನ ಈ ಚಿತ್ರಕ್ಕಾಗಿ ಮುಡಿಪಿಟ್ಟಿದ್ದಾರೆ. ನಾಗ್ ಅಶ್ವೀನ್ ನಿರ್ದೇಶನದ ಈ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಕೆಲ ಸ್ಟಾರ್ ಹೀರೋಗಳು ಕೂಡ ಇಷ್ಟು ಸಂಭಾವನೆ ಪಡೆಯಲ್ಲ ಅನ್ನೋದು ಗಮಿನಿಸಬೇಕಾದ ವಿಷಯ. ಪ್ರಭಾಸ್ ಜೊತೆಗಿನ ಈ ಚಿತ್ರ ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ