Mysore
18
few clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಎಷ್ಟೇ ದೊಡ್ಡ ಭ್ರಷ್ಟ ಇದ್ದರೂ ಕ್ಲೀನ್ ಮಾಡಿಕೊಡುವ ವಾಷಿಂಗ್ ಮಿಷನ್ ಪಕ್ಷ ಬಿಜೆಪಿ: ಆಪ್ ತಿರುಗೇಟು

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ ಕೇಂದ್ರದ ವಿರೋಧ ವಿಪಕ್ಷಗಳು (ಇಂಡಿಯಾ) ತಮ್ಮ ಸಾಮೂಹಿಕ ಸಂಕಲ್ಪ ಅಂಶಗಳನ್ನು ಪ್ರಕಟಿಸಿವೆ.

ಈ ಬೆನ್ನಲ್ಲೇ ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ರಾಜ್ಯ ಬಿಜೆಪಿ ವ್ಯಂಗ್ಯವಾಡಿದ್ದು, ‘ಇದು INDIA ಅಲ್ಲ, ಇಟಲಿಯ Eat INDIA ಕಂಪೆನಿ’ ಎಂದು ಟ್ವೀಟ್ ಮಾಡಿದೆ.

ಬಿಜೆಪಿಯ ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಎಎಪಿ ಕರ್ನಾಟಕ @AAPBangalore, ‘ಆಲಿಬಾಬ ಮತ್ತು ನಲ್ವತ್ತು ಕಳ್ಳರ ಕತೆ ಕೇಳಿರಬಹುದು. ಇದು ಢೋಂಗಿ ಬಾಬ ಮತ್ತು 38 ಕಳ್ಳರ ಗುಂಪು. ಈ ಗುಂಪು ಎಷ್ಟೋ ಜನ ತಮ್ಮ ಪಕ್ಷಕ್ಕೇ ಚೂರಿ ಹಾಕಿದವರು ಇದ್ದಾರೆ! ಇಡಿ – ಐಟಿ ಭಯದಿಂದ ಬಂದವರು ಇದ್ದಾರೆ! ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕುಡೆ-ತುಕುಡೆ ಗ್ಯಾಂಗಿನವರಿದ್ದಾರೆ ! ಎಲ್ಲಿ ಅಧಿಕಾರ ಇರುತ್ತೋ ಅಲ್ಲಿ ಹೋಗುವ ಬಹಳಷ್ಟು ಗಂಜಿ ಗಿರಾಕಿಗಳಿದ್ದಾರೆ! ನಿನ್ನೆ ತನಕ ಕಳ್ಳರಾಗಿದ್ದವರು ಇಂದು ಮಳ್ಳರಾಗಿದ್ದಾರೆ ! ಎಷ್ಟೇ ದೊಡ್ಡ ಭ್ರಷ್ಟ ಇದ್ದರೂ, ಪಕ್ಷ ಸೇರಿದ ಕೂಡಲೇ ಕ್ಲೀನ್ ಮಾಡಿಕೊಡುವ ಬಿಜೆಪಿ ವಾಷಿಂಗ್ ಮಿಷನ್ ಪಕ್ಷ ಇದೆ’ ಎಂದು ತಿರುಗೇಟು ನೀಡಿದೆ.

Welcome to NDA

N : Narendra

D : Dummy of

A : Ambani & Adani

#INDIA vs NDA ಎಂದು NDA ಮೈತ್ರಿ ಕೂಟದ ಬಗ್ಗೆ ಕುಟುಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!