Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲ, ಬಿಜೆಪಿ ಜೊತೆಗೆ ಹೋದರೆ ಜಾತ್ಯಾತೀತವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ವಿಧಾನಸೌಧದಲ್ಲಿ ಸೋಮವಾರ ಮಾತನಾಡಿ, ಮಹಾಘಟಬಂಧನ್ ಅಂತ ಬಂದು ನಂತರ ಏನಾಯ್ತು ನೋಡಿದ್ರಲ್ಲಾ ಅಂತ ಎಚ್.ಡಿ.ಕೆ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಜೆಡಿಎಸ್‌ಗೆ ಸಿದ್ಧಾಂತವೇ ಇಲ್ಲ, ಬಿಜೆಪಿ ಜೊತೆಗೆ ಹೋದರೆ ಜಾತ್ಯಾತೀತವೇ? ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ಈ ಬಾರಿ ಪ್ರಧಾನಿ ನರೇಂದ್ರ ಮೋದಿಗೆ ಬಹುಮತ ಸಿಗೋದಿಲ್ಲ. ಅವರು ಸೋಲ್ತಾರೆ ಎಂದು ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದರು.

ವಿಪಕ್ಷ ನಾಯಕರ ಎರಡನೇ ಸಭೆ ನಡೆಯುತ್ತಿದೆ. ಸುಮಾರು 24 ಪಕ್ಷದ ನಾಯಕರು ಸಭೆಯಲ್ಲಿ ಭಾಗಿಯಾಗ್ತಿದ್ದಾರೆ. ಎಲ್ಲಾ ವಿಪಕ್ಷಗಳ ನಾಯಕರು ಕೂಡ ಭಾಗಿಯಾಗ್ತಿದ್ದಾರೆ. ಇಂದು ಮತ್ತು ನಾಳೆ ಎರಡು ದಿನ ಚರ್ಚೆ ನಡೆಯಲಿದೆ. ಮುಂದಿನ ಲೋಕಸಭಾ ಚುನಾವಣೆಗೆ ಒಟ್ಟುಗೂಡಿ ಚುನಾವಣೆ ನಡೆಸಬೇಕು ಅನ್ನೋದು ಅಜೆಂಡಾ.‌ ಹಾಗಾಗಿ ಚರ್ಚೆ ನಡೆಯುತ್ತಿದೆ ಎಂದರು.

ಕಾಂಗ್ರೆಸ್ ದೇಶದ ಆರ್ಥಿಕತೆ ಹಾಳು ಮಾಡಿದ್ರು ಅನ್ನೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದೆ ಬಿಜೆಪಿಯವರು. ನರೇಂದ್ರ ಮೋದಿ ಬಂದ ಮೇಲೆ ಬೆಲೆ ಏರಿಕೆಯಾಗಿದೆ, ಆರ್ಥಿಕತೆ ಹಾಳಾಗಿದೆ. ಜನರು ಬದುಕಲು ಸಾಧ್ಯವಾಗದ ರೀತಿಯಾಗಿದೆ.‌ ಕೋಮುವಾದ ಘಟನೆಗಳು ಹೆಚ್ಚಾಗಿದೆ‌ ಎಂದರು.

ಬಿಜೆಪಿ ಮುಗಿಸಲು ಒಟ್ಟಾಗಿದ್ದಾರೆ ಅನ್ನೋ ಆರೋಪ ವಿಚಾರಕ್ಕೆ,‌ ಕರ್ನಾಟಕದಲ್ಲಿ ಸಮರ್ಥವಾಗಿ ಎದುರಿಸಲಿಲ್ವಾ.? ಮೋದಿಯವರು ಎಲ್ಲೆಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ನಡೆಸಿದ್ರು. 28 ಕಡೆ ಮೋದಿ ಹೋಗಿದ್ರು. ಹೋದ ಕಡೆಯಲ್ಲೆಲ್ಲಾ ನಾವು ಗೆದ್ದಿದ್ದೇವೆ. ಈ ಬಾರಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಸೋಲಲಿವೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ