Mysore
23
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಖರೀದಿ ಹಾಲಿನ ದರ ಕಡಿತ ಮಾಡಿದ ಮನ್ಮುಲ್

ಮಂಡ್ಯ : ಹಳೆ ಮೈಸೂರು ಭಾಗದಲ್ಲಿ ಮುಂಗಾರು ಮಳೆ ಕ್ಷೀಣಿಸಿರುವ ಹಿನ್ನೆಲೆ ಬರಗಾಲದ ಮುನ್ಸೂಚನೆಯನ್ನು ಎದುರಿಸುತ್ತಿದೆ. ಈ ಹೊತ್ತಿನಲ್ಲಿ ಮಂಡ್ಯ ಜಿಲ್ಲೆಯ ರೈತರಿಗೆ ಮನ್ಮುಲ್ ಬಿಗ್ ಶಾಕ್ ನೀಡಿದೆ.

ರೈತರಿಂದ ಖರೀದಿ ಮಾಡುವ ಹಾಲಿಗೆ ಲೀಟರ್‌ಗೆ 1.75 ರೂ. ಅನ್ನು ಕಡಿತ ಮಾಡಿದೆ. ಲೀಟರ್ ಹಾಲಿಗೆ 32.25 ರೂ. ಬದಲಿಗೆ 30.50 ರೂ. ಅನ್ನು ಇಂದಿನಿಂದ ನೀಡಲಾಗುತ್ತದೆ ಎಂದು ಮನ್ಮುಲ್ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮನ್ಮುಲ್ ಒಕ್ಕೂಟದ ಸ್ಥಿತಿಗತಿಯನ್ನು ನೋಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮೊದಲೇ ಮಳೆ ಇಲ್ಲದೆ ವ್ಯವಸಾಯ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುವ ರೈತರು, ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಮನ್ಮುಲ್ ತೆಗೆದುಕೊಂಡಿರುವ ನಿರ್ಧಾರ ರೈತರಲ್ಲಿ ಆತಂಕ ಉಂಟುಮಾಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!