Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಟ್ವಿಟ್ಟರ್‌ಗೆ ಥ್ರೆಡ್‌ ಆ್ಯಪ್ ಸೆಡ್ಡು

  • ವಾಸು.ವಿ ಹೊಂಗನೂರು

ಟ್ವಿಟರ್ ಗೆ ಮೆಟಾ ಸಂಸ್ಥೆಯ ಥ್ರೆಡ್ ಆ್ಯಪ್ ಸೆಡ್ಡು ಹೊಡೆದಿದೆ. ಮೆಟಾ ಸಂಸ್ಥೆಯ ಥ್ರೆಡ್ ಆ್ಯಪ್ ಬಿಡುಗಡೆಯಾಗುತ್ತಿದ್ದಂತೆಯೇ ಕೇವಲ 1 ಗಂಟೆಯಲ್ಲಿ ಬರೋಬ್ಬರಿ 10 ಮಿಲಿಯನ್ ಬಳಕೆದಾರರು ಥ್ರೆಡ್‌ಗೆ ಸೈನ್ ಅಪ್ ಆಗಿದ್ದು, ಈ ಬೆಳವಣಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಚ್ಚರಿಹುಟ್ಟಿಸಿದೆ. ಮೆಟಾದ ಫ್ರೆಡ್‌ಗಳು ಏಳು ಗಂಟೆಗಳಲ್ಲಿ 10 ಮಿಲಿಯನ್ ಸೈನ್-ಅಪ್ ಗಳೊಂದಿಗೆ ಭರವಸೆಯ ಆರಂಭ ಪಡೆದಿದ್ದು, ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥ ಸಿಇಒ ಮಾರ್ಕ್ ಜುಕರ್ ಬರ್ಗ್ ಸಂತಸ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಯುರೋಪಿಯನ್ ಒಕ್ಕೂಟದ ನಿಯಂತ್ರಕರಿಂದ ಈ ಫ್ರೆಡ್‌ಗೆ ಇನ್ನೂ ಹಸಿರು ನಿಶಾನೆ ದೊರೆತಿಲ್ಲ.

ಇನ್‌ಸ್ಟಾಗ್ರಾಮ್‌ಗಿಂತ ಭಿನ್ನವಾಗಿ, ಫ್ರೆಡ್ ಪಠ್ಯ-ಕೇಂದ್ರಿತವಾಗಿದ್ದು,ಬಳಕೆದಾರರಿಗೆ 500 ಅಕ್ಷರಗಳವರೆಗೆ ಬರೆಯಲು ಮತ್ತು ಫೋಟೋಗಳು ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡಲು ಥ್ರೆಡ್‌ ಅನುವು ಮಾಡಿಕೊಡುತ್ತದೆ. ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯೊಂದಿಗೆ ಬ್ರೆಡ್‌ನಲ್ಲೂ ಲಾಗ್ ಇನ್ ಮಾಡಬಹುದು ಮತ್ತು ಅವರ ಬಳಕೆದಾರ ಹೆಸರನ್ನು ಫ್ರೆಡ್ ವರ್ಗಾಯಿಸಬಹುದು. ಇದನ್ನು ಸ್ವತಂತ್ರವಾಗಿಯೂ ಕಸ್ಟಮೈಸ್ ಮಾಡಬಹುದು.ಇನ್‌ಸ್ಟಾ ಖಾತೆ ಇಲ್ಲದ ಬಳಕೆದಾರರು ಫ್ರೆಡ್ ನಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ ಎನ್ನಲಾಗಿದೆ. ಅಲ್ಲದೆ, ಫ್ರೆಡ್ ಖಾತೆಯನ್ನು ಅಳಿಸುವುದರಿಂದ ಲಿಂಕ್ ಮಾಡಲಾದ ಇನ್‌ಸ್ಟಾ ಗ್ರಾಮ್ ಖಾತೆಯನ್ನೂ ಅಳಿಸಲಾಗುತ್ತದೆ, ಇದು ಬಳಕೆದಾರರ ಅನುಭವವನ್ನು ಅನನುಕೂಲಗೊಳಿಸುತ್ತದೆ. ಟ್ವಿಟ್ಟರ್ ಸಂಸ್ಥಾಪಕ ಜ್ಯಾಕ್ ಡಾರ್ಸೆಯಿಂದ ಬೆಂಬಲಿತವಾದ ಬ್ಲೂಸ್ಥೆಯನ್ನು ಪ್ರಾರಂಭಿಸಿದಾಗ, ಇದು ಟ್ವಿಟ್ಟರ್‌ನ ಪರ್ಯಾಯವಾಗಿ ಪ್ರಚಾರವಾಗಿತ್ತು. ಆದರೆ ಇದೀಗ ಫೇಸ್ ಬುಕ್‌ ಮಾತೃ ಸಂಸ್ಥೆಯಾದ ಮೆಟಾ ಕೂಡ ಫ್ರೆಡ್ ಮೂಲಕ ಟ್ವಿಟ್ಟರ್‌ಗೆ ಸೆಡ್ಡು ಹೊಡೆದಿದೆ.

ಲಿಂಕ್ ಮಾಡುವುದು ಹೇಗೆ ? : ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಆಕೌಂಟ್ ಮೂಲಕ ಫ್ರೆಡ್ಸ್‌ಗೆ ಲಿಂಕ್ ಮಾಡಬಹುದು. ಇನ್‌ಸ್ಟಾಗ್ರಾಮ್‌ನ ಯೂಸರ್ ನೇಮ್ ಥ್ರೆಡ್ಸ್ ನಲ್ಲೂ ಮುಂದುವರಿಸಬಹುದು. ವಿಶೇಷ ಎಂದರೆ, ಬಳಕೆದಾರರ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಬ್ಲೂ ಟಿಕ್ ಇದ್ದರೆ ಅದು ಥ್ರೆಡ್ಸ್ ನಲ್ಲಿ ಕಾಣಿಸಲಿದೆ. ಈ ಆ್ಯಪ್ ಥೇಟ್ ಟ್ವಿಟ್ಟರ್ ರೀತಿಯ ವೈಶಿಷ್ಟ್ಯಗಳೊಂದಿಗೆ ಬಂದಿದೆ.

ಭಾರತದಲ್ಲಿ 2 ತಾಸುಗಳಲ್ಲಿ 2 ಮಿಲಿಯನ್ ಡೌನ್‌ಲೋಡ್‌ : ಮೆಟಾ ಸಂಸ್ಥೆಯು ಥ್ರೆಡ್ಸ್ ಆ್ಯಪ್ ಅನ್ನು ಭಾರತ ಸೇರಿದಂತೆ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಭಾರತದಲ್ಲಿ 2 ತಾಸುಗಳಲ್ಲಿ 2 ಮಿಲಿಯನ್ ಡೌನ್ ಲೋಡ್ ಆಗಿದೆ. ಹೊಸ ಅಪ್ಲಿಕೇಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಐಫೋನ್ ಬಳಕೆದಾರರಿಗೆ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬುಧವಾರ ಮಧ್ಯ ರಾತ್ರಿ ಯುಕೆಯಲ್ಲಿ ಥ್ರೆಡ್ಸ್ ಅಪ್ಲಿಕೇಶನ್ ಲೈವ್ ಮಾಡಲಾಯಿತು. ಇದೀಗ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ, ಭಾರತ ಮತ್ತು ಜಪಾನ್ ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಿದೆ. ಇದು ಕಟ್ಟು ನಿಟ್ಟಾದ ಡೇಟಾ ಗೌಪ್ಯತೆ ನಿಯಮಗಳನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ

500 ಅಕ್ಷರಗಳವರೆಗೆ ಬರೆಯಲು ಅವಕಾಶ : ಥ್ರೆಡ್ಸ್ ಆ್ಯಪ್‌ನಲ್ಲಿ ಪ್ರತಿ ಪೋಸ್ಟ್ 500 ಅಕ್ಷರಗಳವರೆಗೆ ಬರೆಯಬಹುದು. ಲಿಂಕ್‌ಗಳು, ಫೋಟೋಗಳು ಮತ್ತು 5 ನಿಮಿಷಗಳ ಅವಧಿಯ ವಿಡಿಯೋ ಗಳನ್ನು ಹಂಚಿಕೊಳ್ಳಬಹುದಾಗಿದೆ

ನಿಮ್ಮ ಫ್ರೆಡ್ ಪೋಸ್ಟ್‌ಗೆ ಯಾರು ಪ್ರತ್ಯುತ್ತರ ನೀಡ ಬಹುದು ಎಂಬುದನ್ನೂ ಬಳಕೆದಾರರು ನಿಯಂತ್ರಿಸಬಹುದು. ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡುವ ಮೂಲಕ ನೀವು ಥ್ರೆಡ್ಸ್ ಪ್ರೊಫೈಲ್‌ನಲ್ಲಿ ಸೆಟ್ಟಿಂಗ್ಸ್ ಬದಲಾಯಿಸಬಹುದಾಗಿದೆ. ಆದರೆ, ಬಳಕೆದಾರರಿಗೆ ಜಿಪ್ ಫೈಲ್ ಗಳನ್ನು ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿಲ್ಲ. ಹಾಗೆಯೆ ‘ಕ್ಲೋಸ್ ಫ್ರೆಂಡ್ಸ್’ ವೈಶಿಷ್ಟ್ಯವಿಲ್ಲ.

ಟಿಕ್ ಟಾಕ್ ನಿಷೇಧಕ್ಕೆ ಒತ್ತಾಯ! : ಮತ್ತೊಂದೆಡೆ ಫ್ರಾನ್ಸ್‌ನಲ್ಲಿ ಸಂಘರ್ಷ ಮುಂದುವರಿದಿರುವಂತೆಯೇ ಫ್ರೆಂಚ್ ಸಂಸದರು ಟಿಕ್ ಟಾಕ್ ಅನ್ನು ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ಇತ್ತೀಚಿನ ಗಲಭೆಗಳನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮಗಳು ಕಾರಣವಾಗಿವೆ ಎಂಬ ಅಲ್ಲಿನ ಜನಪ್ರತಿನಿಧಿಗಳ ಆರೋಪದ ನಡುವೆಯೇ ಫ್ರಾನ್ಸ್ ಸಂಸದರು ಈ ಪತ್ತಾಯ ಮಾಡಿರುವುದು ಮಹತ್ವ ಪಡೆದುಕೊಂಡಿದೆ. ಟಿಕ್ ಟಾಕ್ ಅನ್ನು
ನೀಷೇಧಿಸಿ ಅದು ಶುದ್ಧವಾಗಬೇಕೆಂದು ಫ್ರೆಂಚ್ ಸಂಸದರು. ಆಗ್ರಹಿಸುತ್ತಿದ್ದಾರೆ. ಚೀನಾದೊಂದಿಗೆ ಅದರ ಸಂಪರ್ಕವನ್ನು ಸ್ಪಷ್ಟಪಡಿಸದ ಹೊರತು ವೀಡಿಯೊ ಹಂಚಿಕೆ ವೇದಿಕೆ ಟಿಕ್ ಟಾಕ್ ಅನ್ನು ನಿಷೇಧಿಸುವಂತೆ ಫ್ರೆಂಚ್ ಸಂಸದರು ಗುರುವಾರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸೂಪರ್ ಇಂಟೆಲಿಜೆನ್ಸ್ ಸಮಸ್ಯೆ ನಿಭಾಯಿಸಲು ತಂಡ : ಬಾಟ್ ಜಿಪಿಟಿ ಮೂಲಕ ಜಗತ್ತಿನಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಚಾಟ್ ಜಿಪಿಟಿಯ ಸೃಷ್ಟಿಕರ್ತ ಓಪನ್ ಅಲ್ ಸಂಸ್ಥೆ ತನ್ನದೇ ಸೂಪರ್ ಇಂಟೆಲಿಜೆನ್ಸ್ ನ ಸಮಸ್ಯೆಗಳನ್ನು ನಿಭಾಯಿಸಲು ಮೀಸಲು ತಂಡ ರಚನೆ ಮಾಡುವುದಾಗಿ ಘೋಷಣೆ ಮಾಡಿದೆ. ಚಾಟ್‌ ಜಿಪಿಟಿಯ ಸೃಷ್ಟಿಕರ್ತ ಓಪನ್ ಅಲ್, ಮುಂದಿನ 4 ವರ್ಷಗಳಲ್ಲಿ ಕೃತಕ ಸೂಪರ್‌ ಇಂಟೆಲಿಜೆನ್ಸ್‌ನ ಸಮಸ್ಯೆಯನ್ನು ನಿಭಾಯಿ ಸಲು ಮೀಸಲಾದ ತಂಡವನ್ನು ರಚಿಸಿದೆ. ತಂಡವನ್ನು ಸಹ-ಸಂಸ್ಥಾಪಕರಲ್ಲಿ ಒಬ್ಬರಾದ ಇಲ್ಯಾ ಸುಟ್‌ಸ್ಟೇವರ್‌ ಮತ್ತು ಜಾನ್ ಲೈಕ್ ಸಹ-ನೇತೃತ್ವ ವಹಿಸುತ್ತಾರೆ. ತನ್ನ ಕಂಪ್ಯೂಟಿಂಗ್ ಶಕ್ತಿಯನ್ನು ಶೇ.20 ರಷ್ಟು ಈ ಪ್ರಯತ್ನಕ್ಕೆ ಮೀಸಲಿಡುತ್ತದೆ. ಸೂಪರ್ ಇಂಟೆಲಿಜೆನ್ಸ್ ಈಗ ದೂರವಿದ್ದಂತೆ ತೋರುತ್ತದೆ ಯಾದರೂ, ಇದು ಈ ದಶಕದಲ್ಲಿ ಮತ್ತೆ ಬರಬಹುದು ಎಂದು ಓಪನ್ ಆಲ್ ಸಂಸ್ಥೆ ಹೇಳಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ