Mysore
30
overcast clouds

Social Media

ಸೋಮವಾರ, 27 ಜುಲೈ 2026
Light
Dark

ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಲ್ಲ: ರಾಖಿ ಸಾವಂತ್​

ಮುಂಬೈ: ನಟಿ ರಾಖಿ ಸಾವಂತ್​ ಅವರು ಬಾಲಿವುಡ್​ ಅಂಗಳದಲ್ಲಿ ಸಖತ್​​ ಸುದ್ದಿಯಲ್ಲಿರುವ ನಟಿ. ಈಕೆ ಇದೀಗ ನಟ ಸಲ್ಮಾನ್​​ ಖಾನ್​ ಅವರ ಮದುವೆ ವಿಚಾರವಾಗಿ ಮಾತನಾಡಿ ಮತ್ತೆ ಇಂದು ಸುದ್ದಿಯಲ್ಲಿದ್ದಾರೆ.

ಹೌದು.. ಬಾಲಿವುಡ್ ಕಾಂಟ್ರವರ್ಸಿ ಆಂಡ್ ಸೆನ್ಸೇಷನ್ ಕ್ರಿಯೇಟರ್ ರಾಖಿ ಸಾವಂತ್ ಏರ್‌ಪೋರ್ಟ್‌ನಲ್ಲಿ ಮತ್ತೊಂದು ಹೈ ಡ್ರಾಮಾ ಶುರು ಮಾಡಿಕೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಖಿ ಸಾವಂತ್ ಗ್ರೀನ್ ಕ್ರಾಪ್ ಟಾಪ್‌ಗೆ ಬ್ಯೂ ಡೆನಿಮ್ ಪ್ಯಾಂಟ್ ಧರಿಸಿ ಪಿಂಕ್ ಬಣ್ಣದ ಜಾಕೆಟ್‌ನಲ್ಲಿ ಮುಖ ಮುಚ್ಚಿಕೊಂಡು ಬರುತ್ತಿರುತ್ತಾರೆ.

ಏಕೆ ಹೀಗೆ ಎಂಬ ಪ್ರಶ್ನೆ ಎದುರಾಯಿತು. ಯಾಕೆ ಚಪ್ಪಲಿ ಹಾಕಿಲ್ಲ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ರಾಖಿ, ‘ನಾನು ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಬಾರದು ಎನ್ನುವ ನಿರ್ಧಾರಕ್ಕೆ ಬಂದಿರುವೆ. ಆ ರೀತಿ ಶಪಥ ಮಾಡಿರುವೆ’ ಎಂದಿದ್ದಾರೆ. ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಲ್ಮಾನ್ ಖಾನ್ ಮೇಲೆ ನಟಿ ರಾಖಿ ಸಾವಂತ್​​ಗೆ ಅಭಿಮಾನ ಮತ್ತು ಪ್ರೀತಿ. ರಾಖಿಯ ಕಷ್ಟದ ದಿನಗಳಲ್ಲಿ ಸಲ್ಮಾನ್ ಕೈ ಹಿಡಿದಿದ್ದರು ಎನ್ನುವ ಕಾರಣಕ್ಕಾಗಿ ಸಲ್ಮಾನ್ ಪರ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!