Mysore
27
overcast clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಯೋಗಿ ಬಾಬು ನಟನೆಯ ತಮಿಳು ಚಿತ್ರಕ್ಕೆ ಸಾಧು ಕೋಕಿಲಾ ಪುತ್ರ ಸುರಾಗ್ ನಿರ್ದೇಶನ!

ಕಾಸೇಧಾನ್ ಕಡವುಲದಾ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಯೋಗಿ ಬಾಬು ಅವರು ತಮ್ಮ ಮುಂದಿನ ಚಿತ್ರಕ್ಕೆ ನಾಯಕರಾಗಿ ಸಹಿ ಹಾಕಿದ್ದಾರೆ. ಶಿವಾರ್ಜುನ ಮತ್ತು ಅತಿರಥ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕನ್ನಡದ ಸಂಯೋಜಕ ಸುರಾಗ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಸದ್ಯ ತಮಿಳಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಬೇರೆ ಭಾಷೆಗಳಿಗೆ ಡಬ್ ಆಗಲಿದೆ.

ಸುರಾಗ್ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವುದರ ಜೊತೆಗೆ, ಉಪ್ಪಿ 2 ನಲ್ಲಿ ಉಪೇಂದ್ರ ಅವರ ಅಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಗಮನಾರ್ಹವಾಗಿ, ಈ ಯುವ ಪ್ರತಿಭೆ ಕನ್ನಡದ ಜನಪ್ರಿಯ ಸಂಗೀತ ಸಂಯೋಜಕ, ನಟ ಮತ್ತು ನಿರ್ದೇಶಕ ಸಾಧು ಕೋಕಿಲಾ ಅವರ ಮಗ.

ಕಾಮಿಕಲ್ ಥ್ರಿಲ್ಲರ್‌ನ ಚಿತ್ರೀಕರಣ ಪ್ರಾರಂಭವಾಗಿದ್ದು, ಅವರು ಒಂದು ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಯೋಗಿ ಬಾಬು ಅವರ ಸಿನಿಮಾಗೆ ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಬಗ್ಗೆ ಮಾತನಾಡುವ ಸುರಾಗ್, ‘ಯೋಗಿ ಸರ್ ಮತ್ತು ನಾನು ಸುಮಾರು ಒಂದು ವರ್ಷದಿಂದ ಮಾತುಕತೆ ನಡೆಸುತ್ತಿದ್ದೆವು. ಇದೀಗ ಅಂತಿಮವಾಗಿ ಸಿನಿಮಾ ಸೆಟ್ಟೇರಿದೆ. ನಾನು 10 ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ ಮತ್ತು ಮುಂದಿನ ಶೆಡ್ಯೂಲ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ’ ಎನ್ನುತ್ತಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!