ಲಖನೌ : ಎರಡು ಡಜನ್‌ಗೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಕ್ರಿಮಿನಲ್‌ನನ್ನು ಎನ್‌ಕೌಂಟರ್‌ನಲ್ಲಿ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ಮಂಗಳವಾರ ಹತ್ಯೆ ಮಾಡಲಾಗಿದೆ. ಕೊಲೆ ಹಾಗೂ ಡಕಾಯತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಗುಫ್ರಾನ್ ಎಂಬ ಕ್ರಿಮಿನಲ್, ಉತ್ತರ ಪ್ರದೇಶ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಕೌಶಂಬಿ ಜಿಲ್ಲೆಯಲ್ಲಿ ವಿಶೇಷ ಕಾರ್ಯ ಪಡೆಯು ಜಿಲ್ಲೆಯ ಮಾಂಝನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಮ್ದಾ ಶುಗರ್ ಮಿಲ್ ರಸ್ತೆ ಸಮೀಪ ಬೆಳಗಿನ ಜಾವ 5.30ರ ಸುಮಾರಿಗೆ ರೇಡ್ ನಡೆಸುತ್ತಿತ್ತು. ಆಗ ಪೊಲೀಸ್ ತಂಡಕ್ಕೆ ಮುಖಾಮುಖಿಯಾದ ಗುಫ್ರಾನ್, ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡಿನ ದಾಳಿಯ ಉತ್ತರ ನೀಡಿದ್ದಾರೆ. ಪರಸ್ಪರ ಗುಂಡಿನ ಚಕಮಕಿಯಲ್ಲಿ ಆತನಿಗೆ ಬುಲೆಟ್ ತಗುಲಿ ಗಾಯಗಳಾಗಿವೆ. ಗುಫ್ರಾನ್‌ನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತೀವ್ರ ಗಾಯಗಳಿಂದ ಮೃತಪಟ್ಟಿದ್ದಾನೆ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಗಡ ಹಾಗೂ ಇತರೆ ಜಿಲ್ಲೆಗಳಲ್ಲಿ ಕೊಲೆ, ಕೊಲೆ ಪ್ರಯತ್ನ ಮತ್ತು ದರೋಡೆಗಳನ್ನು ನಡೆಸಿದ 18ಕ್ಕೂ ಅಧಿಕ ಪ್ರಕರಣಗಳಲ್ಲಿ ಗುಫ್ರಾನ್ ವಾಂಟೆಡ್ ಲಿಸ್ಟ್‌ನಲ್ಲಿದ್ದ. ಆತನನ್ನು ಬಂಧಿಸಲು ಸುಳಿವು ನೀಡಿದವರಿಗೆ 1 ಲಕ್ಷ ರೂ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು. ಎನ್‌ಕೌಂಟರ್‌ಗೆ ಜೀವ ಕಳೆದುಕೊಂಡ ಗುಫ್ರಾನ್, ಪ್ರತಾಪ್‌ಗಡ ಜಿಲ್ಲೆಯ ಆಜಾದ್ ನಗರ ನಿವಾಸಿಯಾಗಿದ್ದ.
“ಮೊಹಮ್ಮದ್ ಗುಫ್ರಾನ್ ಎಂದು ಗುರುತಿಸಲಾದ ಕ್ರಿಮಿನಲ್, ಕೌಶಂಬಿ ಜಿಲ್ಲೆಯ ಮಾಂಝನ್ಪುರ ಸಮ್ದಾ ಶುಗರ್ ಮಿಲ್ ಸಮೀಪ ಉತ್ತರ ಪ್ರದೇಶ ಎಸ್‌ಟಿಎಫ್ ಜತೆ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ. ಆತನ ತಲೆಗೆ 1,25,000 ರೂ ಬಹುಮಾನ ಘೋಷಿಸಲಾಗಿತ್ತು” ಎಂದು ಕೌಶಂಬಿಯ ಎಸ್‌ಪಿ ಬ್ರಿಜೇಶ್ ಶ್ರೀವಾಸ್ತವ ಹೇಳಿದ್ದಾರೆ.
ಇದಲ್ಲದೆ ಪ್ರಯಾಗ್‌ರಾಜ್ ವಲಯದ ಎಡಿಜಿ ಅವರು ಗುಫ್ರಾನ್ ಪತ್ತೆಗೆ 1 ಲಕ್ಷ ರೂ ಹಾಗೂ ಸುಲ್ತಾನಪುರ ಪೊಲೀಸ್ ಅಧಿಕಾರಿಗಳು 25,000 ರೂ ಬಹುಮಾನ ಪ್ರಕಟಿಸಿದ್ದರು.
ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿಯೇ ಉತ್ತರ! : ಉತ್ತರ ಪ್ರದೇಶ ಪೊಲೀಸರು ಮತ್ತು ಕ್ರಿಮಿನಲ್‌ಗಳ ನಡುವಿನ ಎನ್‌ಕೌಂಟರ್ ಸರಣಿಗೆ ಗುಫ್ರಾನ್ ಹತ್ಯೆ ಹೊಸ ಸೇರ್ಪಡೆಯಾಗಿದೆ. ಯೋಗಿ ಆದಿತ್ಯನಾಥ್ ಅವರು 2017ರಲ್ಲಿ ಉತ್ತರ ಪ್ರದೇಶ ಸಿಎಂ ಆದ ಬಳಿಕ ಈವರೆಗೂ ಪೊಲೀಸರು 10,900 ಎನ್‌ಕೌಂಟರ್‌ಗಳನ್ನು ನಡೆಸಿದ್ದಾರೆ. ಅವರಲ್ಲಿ 185 ಕ್ರಿಮಿನಲ್‌ಗಳನ್ನು ಹತ್ಯೆ ಮಾಡಲಾಗಿದೆ. 5,046 ಮಂದಿ ಗಾಯಗೊಂಡಿದ್ದು, 23,300 ಅಪರಾಧಿಗಳನ್ನು ಬಂಧಿಸಲಾಗಿದೆ.
ಇತ್ತೀಚೆಗೆ ಉತ್ತರ ಪ್ರದೇಶದ ಕುಖ್ಯಾತ ಗ್ಯಾಂಗ್‌ಸ್ಟರ್ ಹಾಗೂ ಸಮಾಜವಾದಿ ಪಕ್ಷದ ಮಾಜಿ ನಾಯಕ ಅತೀಕ್ ಅಹ್ಮದ್‌ನ ಮಗ ಅಸದ್ ಅಹ್ಮದ್ ಹಾಗೂ ಆತನ ಸಹಚರನನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಅದಾಗಿ ಕೆಲವೇ ದಿನಗಳಲ್ಲಿ ಪೊಲೀಸರ ವಶದಲ್ಲಿದ್ದ ಅತೀಕ್ ಮತ್ತು ವನ ಸಹೋದರ ಅಶ್ರಫ್‌ನನ್ನು ಮೂವರು ಯುವಕರು ಗುಂಡಿನ ದಾಳಿ ನಡೆಸಿ ಕೊಂದಿದ್ದರು.
Uttar Pradesh | A criminal identified as Mo. Gufran has been killed in an encounter with UP STF near the Samda sugar mill of Manjhanpur, Kaushambi. He was carrying a reward of Rs 1,25,000: SP Kaushambi Brijesh Srivastava pic.twitter.com/iUdihy1yCe
— ANI UP/Uttarakhand (@ANINewsUP) June 27, 2023