Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಿಶ್ವಕಪ್​ ಟ್ರೋಫಿ ಪ್ರವಾಸಕ್ಕೆ ವಿಶಿಷ್ಟವಾಗಿ ಚಾಲನೆ ನೀಡಿದ ಐಸಿಸಿ!

ದುಬೈ: ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ವಿಶ್ವಕಪ್​ ಟೂರ್ನಿಗೆ ಪೂರ್ವಭಾವಿಯಾಗಿ ಟ್ರೋಫಿ ಪ್ರವಾಸಕ್ಕೆ ಐಸಿಸಿ ಸೋಮವಾರ ಬಾಹ್ಯಾಕಾಶದಲ್ಲಿ ವಿಶಿಷ್ಟ ರೀತಿಯಲ್ಲಿ ಚಾಲನೆ ನೀಡಿದೆ. ಭೂಮಿಗಿಂತ 1,20,000 ಅಡಿ ಎತ್ತರದಲ್ಲಿ ಟ್ರೋಫಿಯನ್ನು ಐಸಿಸಿ ಅನಾವರಣಗೊಳಿಸಿದ್ದು, ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟ್ರೋಫಿಯನ್ನು ಅದ್ಭುತವಾಗಿ ಲ್ಯಾಂಡಿಂಗ್​ ಮಾಡಲಾಯಿತು.

ವಾಯುಮಂಡಲಕ್ಕೆ ಹೊಂದಿಕೊಳ್ಳುವ ಬಲೂನ್​ ಮೂಲಕ ಟ್ರೋಫಿಯನ್ನು ಆಕಾಶಕ್ಕೆ ತೆಗೆದುಕೊಂಡು ಹೋಗಿ, ಭೂಮಿಯ ವಾತಾವರಣದ ಅಂಚಿನಲ್ಲಿ ಅದ್ಭುತವಾಗಿ ಅದರ ಚಿತ್ರಗಳನ್ನು 4ಕೆ ಕ್ಯಾಮರಾಗಳ ಮೂಲಕ ಸೆರೆ ಹಿಡಿಯಲಾಯಿತು.

ಈ ಸಲದ ಟ್ರೋಫಿ ಟೂರ್​ ಇದುವರೆಗಿನ ಅತಿದೊಡ್ಡ ಪ್ರವಾಸವಾಗಿದ್ದು, ವಿಶ್ವದೆಲ್ಲೆಡೆಯ ಅಭಿಮಾನಿಗಳಿಗೆ ವಿಶ್ವಕಪ್​ ಟ್ರೋಫಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗುತ್ತಿದೆ. ಜೂನ್​ 27ರಿಂದ ಒಟ್ಟು 18 ದೇಶಗಳಿಗೆ ಟ್ರೋಫಿ ಪ್ರವಾಸ ಕೈಗೊಳ್ಳಲಿದೆ. ಇದರಲ್ಲಿ ಕುವೈತ್​, ಬಹರೇನ್​, ಮಲೇಷ್ಯಾ, ಅಮೆರಿಕ, ನೈಜೀರಿಯಾ, ಉಗಾಂಡ, ಫ್ರಾನ್ಸ್​, ಇಟಲಿಯಂಥ ಕ್ರಿಕೆಟ್​ ಜನಪ್ರಿಯವಲ್ಲದ ದೇಶಗಳೂ ಇವೆ.

ಜೂನ್​ 27ರಿಂದ ಜುಲೈ 14ರವರೆಗೆ ಭಾರತದಲ್ಲೇ ಪ್ರವಾಸ ಕೈಗೊಳ್ಳಲಿರುವ ಐಸಿಸಿ ಟ್ರೋಫಿ, ಜುಲೈ 15-16ರಂದು ನ್ಯೂಜಿಲೆಂಡ್​, ಜುಲೈ 17-18ರಂದು ಆಸ್ಟ್ರೆಲಿಯಾ, ಜುಲೈ 19-21ರಂದು ಪಪುವಾ ನ್ಯೂಗಿನಿ, ಜುಲೈ 22-24ರಂದು ಭಾರತ, ಜುಲೈ 25-27ರಂದು ಅಮೆರಿಕ, ಜುಲೈ 28-30ರಂದು ವೆಸ್ಟ್​ ಇಂಡೀಸ್​, ಜುಲೈ 31-ಆಗಸ್ಟ್​ 4ರಂದು ಪಾಕಿಸ್ತಾನ, ಆಗಸ್ಟ್​ 5-6ರಂದು ಶ್ರೀಲಂಕಾ, ಆಗಸ್ಟ್​ 7-9ರಂದು ಬಾಂಗ್ಲಾದೇಶ, ಆಗಸ್ಟ್​ 10-11ರಂದು ಕುವೈತ್​, ಆಗಸ್ಟ್​ 12-13ರಂದು ಬಹರೇನ್​, ಆಗಸ್ಟ್​ 14-15ರಂದು ಭಾರತ, ಆಗಸ್ಟ್​ 16-18ರಂದು ಇಟಲಿ, ಆಗಸ್ಟ್​ 19-20ರಂದು ಫ್ರಾನ್ಸ್​, ಆಗಸ್ಟ್​ 21-24ರಂದು ಇಂಗ್ಲೆಂಡ್​, ಆಗಸ್ಟ್​ 25-26ರಂದು ಮಲೇಷ್ಯಾ, ಆಗಸ್ಟ್​ 27-28ರಂದು ಉಗಾಂಡ, ಆಗಸ್ಟ್​ 29-30ರಂದು ನೈಜೀರಿಯಾ, ಆಗಸ್ಟ್​ 31-ಸೆಪ್ಟೆಂಬರ್​ 3ರಂದು ದಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಸೆಪ್ಟೆಂಬರ್​ 4ರಿಂದ ಟೂರ್ನಿಯವರೆಗೆ ಆತಿಥೇಯ ಭಾರತದಲ್ಲೇ ಪ್ರವಾಸದಲ್ಲಿರಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ