ಮೈಸೂರು : ಬೀಡಾ ಅಂಗಡಿಯಲ್ಲಿ ಹಣ ನೀಡುವ ವಿಚಾರವಾಗಿ ಕೆ.ಆರ್.ನಗರ ಕ್ಷೇತ್ರದ ಮಾಜಿ ಶಾಸಕ ಸಾರಾ.ಮಹೇಶ್ ಪುತ್ರ ಹಾಗೂ ಪತ್ರಕರ್ತರೊಬ್ಬರ ಮಗನ ನಡುವೆ ಭಾನುವಾರ ರಾತ್ರಿ ಗಲಾಟೆಯಾಗಿದೆ.
ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೈಸೂರಿನ ಕುಂವೆಂಪುನಗರದಲ್ಲಿರುವ ಹೋಟೆಲ್ ಒಂದರ ಮುಂಭಾಗ ಘಟನೆ ನಡೆದಿದೆ.
ಉಟದ ಬಳಿಕ ಬೀಡ ತಿಂದು ಹಣ ನೀಡಲು ಸಾ.ರಾ.ಜಯಂತ್ ಮುಂದಾಗಿದ್ದು, ಈ ವೇಳೆ ಪತ್ರಕರ್ತರ ಮಗ ಸ್ಕ್ಯಾನರ್ಗೆ ಅಡ್ಡ ನಿಂತಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಬಡಿದಾಟಕ್ಕೆ ಕಾರಣವಾಗಿದೆ.
ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿ ಕುವೆಂಪುನಗರ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದು ಇಬ್ಬರನ್ನು ಠಾಣೆಗೆ ಕರೆದೊಯ್ದು, ಬುದ್ದಿವಾದ ಹೇಳಿ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಕಳುಹಿಸಿದ್ಧಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಈ ಇಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ.