Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪ್ರತಾಪ್‌ ಸಿಂಹ ಬಾಯಿ ಮುಚ್ಕೊಂಡಿರಬೇಕು: ಸಂಸದರಿಗೆ ಪ್ರದೀಪ್ ಈಶ್ವರ್ ಕೌಂಟರ್

ಚಿಕ್ಕಬಳ್ಳಾಪುರ : ಅನ್ನ ಭಾಗ್ಯ ಅಕ್ಕಿ ವಿಚಾರವಾಗಿ ಬಿಜೆಪಿ-ಕಾಂಗ್ರೆಸ್​ ನಾಯಕರ ನಡುವೆ ಮಾತಿನ ಸಮರ ಮುಂದುವರಿದಿದೆ. ನಾಯಕರು ಕೌಂಟರ್​​​​-ಪ್ರತಿ ಕೌಂಟರ್​​ ಕೊಡುತ್ತಿದ್ದಾರೆ. ಕೋಲಾರ ಸಂಸದ ಮುನಿಸ್ವಾಮಿ ಮತ್ತು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್  ಈಶ್ವರ್  ನಡುವೆ  ವಾಗ್ಯುದ್ದ ನಡೆದಿದೆ.

ಪ್ರದೀಪ್ ಈಶ್ವರ್ ವಿರುದ್ಧ ಮಾತನಾಡಿದ್ದ ಬಿಜೆಪಿ  ಸಂಸದ ಮುನಿಸ್ವಾಮಿ, ಇಲ್ಲಿ ಯಾರೋ ಒಬ್ಬ ಚಿಕ್ಕಬಳ್ಳಾಪುರಕ್ಕೆ ಬಂದಿದ್ದಾನೆ. ಬೆಳಗ್ಗೆಯಿಂದ ಸಂಜೆವರೆಗೂ ಅಪ್ಪ-ಅಮ್ಮ ಅಂತಿದ್ದಾನೆ. ಈ ಥರದವರನ್ನು ನಾನ್ ನೋಡಿಲ್ಲ, ಅಬ್ಬಬ್ಬಾ ಏನ್ ಡ್ರಾಮಾ. ಮುಂದಿದೆ ಮಾರಿ ಹಬ್ಬ ಎಂದು ಮುನಿಸ್ವಾಮಿ ಕಿಡಿಕಾರಿದ್ದರು.
ಸಂಸದ ಮುನಿಸ್ವಾಮಿ ಅವರ ಹೇಳಿಕೆಗೆ ಪ್ರದೀಪ್ ಈಶ್ವರ್  ತಿರುಗೇಟು ನೀಡಿದ್ದಾರೆ, ಅವರ್ಯಾರೋ ಮನಿಸ್ವಾಮಿ ಅಂತೆ. ಅವ್ರ ಹೆಸರು ಕೋಲಾರದವರಿಗೆ ಗೊತ್ತಿಲ್ಲ, ಅವರೊಂಥರಾ ಚೈಲ್ಡ್ ಆರ್ಟಿಸ್ಟ್, ಒಬ್ಬ ಎಂಪಿ ಹೇಗೆ ಇರಬೇಕು ಎಂಬುದು ಅವರಿಗೆ ತಿಳಿದಿಲ್ಲ, ಮುಂದಿದೆ ಮುಸಲು ಪಂಡಗಾ (ಮಾರಿಹಬ್ಬ) ಅಂತಾ ನನಗೆ ಹೇಳ್ತಿದ್ದಾರೆ. ಮುನಿಶಾಮಣ್ಣ ನನಗೆ ಐದು ವರ್ಷಕ್ಕೆ ಇದೆ ಪಂಡಗಾ. ನಿಮಗೆ ಮುಂದಿನ ವರ್ಷವೇ ಇದೆ, ನಾವು ಬರ್ತೀವಿ ಎಂದು ಸಂಸದ ಮುನಿಸ್ವಾಮಿಗೆ  ಪ್ರದೀಪ್ ಈಶ್ವರ್ ಚಾಲೆಂಜ್ ಮಾಡಿದ್ದಾರೆ.
ಇನ್ನೂ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಹರಿಹಾಯ್ದಿರುವ ಪ್ರದೀಪ್ ಈಶ್ವರ್,  ನಾನೇನೋ ಹೊಸ ಶಾಸಕ. ಮೊದಲ ಬಾರಿ ಗೆದ್ದಿದ್ದೇನೆ. ನೀವು ಸಂಸದರಾಗಿ ಒಂಬತ್ತು ವರ್ಷ ಆಯ್ತಲ್ವಾ? ನಿಮಗಿನ್ನೂ ಸರಿಯಾಗಿ ಯಾರೂ ಮಾತು ಕಲಿಸಿಲ್ವಲ್ವ? ಎಂದು ಠಕ್ಕರ್‌ ನೀಡಿದ್ದಾರೆ.
ಶಾಸಕರಾಗಿ 40 ವರ್ಷಗಳ ಅನುಭವ ಇರುವ ಸಿದ್ದರಾಮಯ್ಯ ಅವರು ಹೊಸ ಶಾಸಕರಿಗೆ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಓರಿಯೆಂಟೇಷನ್‌ ಕ್ಲಾಸ್‌ ತೆಗೆದುಕೊಳ್ಳಬೇಕು ಎಂದು ಪ್ರತಾಪ್‌ಸಿಂಹ ಅವರು ಇತ್ತೀಚೆಗೆ ಹೇಳಿದ್ದರು. ಅಕ್ಕಿ ವಿಚಾರದಲ್ಲಿ ಬಹಿರಂಗ ಚರ್ಚೆ ಮಾಡೋಣ ಬನ್ನಿ ಎಂದು ಪ್ರದೀಪ್‌ ಈಶ್ವರ್‌ ಅವರು ತೇಜಸ್ವಿ ಸೂರ್ಯ ಮತ್ತು ಪ್ರತಾಪ್‌ ಸಿಂಹ ಅವರಿಗೆ ನೀಡಿದ ಬಹಿರಂಗ ಕರೆಗೆ ನೀಡಿದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದರು.
ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪ್ರದೀಪ್ ಈಶ್ವರ್ ನಿಮಗೆ ತಾಕತ್ ಇದ್ರೆ ಪ್ರಾಮಾಣಿಕರಾದ್ರೆ ಬಹಿರಂಗ ಚರ್ಚೆಗೆ ಬನ್ನಿ. ಸಾವಿರಾರು ಜನರನ್ನು ಕೂರಿಸಿ ನೀವೇನ್ ಮಾಡಿದ್ದೀರಿ ಹೇಳಿ, ಸಿದ್ದರಾಮಯ್ಯ ಸಾಹೆಬ್ರು ಏನ್ ಮಾಡಿದ್ದಾರೆ ಅಂತ ನಾನು ಹೇಳ್ತೇನೆ ಎಂದಿದ್ದಾರೆ.

ಮೈಸೂರು ಸಂಸದರಾದ ಪ್ರತಾಪ್‌ ಸಿಂಹ ಅವರೇ ನೀವು ಬಾಯಿ ಮುಚ್ಕೊಂಡಿರ್ಬೇಕು. ಮಾತಾಡೋಕೆ ನಮಗೂ ಬರ್ತದೆ. ನಿಮಗೆ ನಿಜಕ್ಕೂ ಮಾತನಾಡೋಕೆ ಬರ್ತದೆ ಅಂತಿದ್ದರೆ ಬಹಿರಂಗ ಚರ್ಚೆಗೆ ಬನ್ನಿ. ನೀವು ಏನೇನು ಮಾಡಿದ್ದೀರಿ ಅಂತ ಹೇಳಿ, ಸಿದ್ದರಾಮಯ್ಯ ಅವರು ಏನೇನು ಮಾಡಿದ್ದಾರೆ ಅಂತ ನಾನೂ ಹೇಳ್ತೀನಿʼʼ ಎಂದರು ಪ್ರದೀಪ್‌ ಈಶ್ವರ್‌. ನೀವು ಎರಡೂ ಚುನಾವಣೆಗಳನ್ನು ಗೆದ್ದಿರುವುದು ಮೋದಿ ಅವರ ಹೆಸರಿನಲ್ಲಿ. ನಿಮ್ಮ ನೆಲೆಯಲ್ಲಿ ನೀವು ಏನು ಸಾಧನೆ ಮಾಡಿದ್ದೀರಿ ಎಂದು ಮೊದಲು ಹೇಳಿ ಎಂದ ಸವಾಲು ಹಾಕಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ