ಗ್ಯಾಂಗ್ಟಾಕ್: ಕುಂಭದ್ರೋಣ ಮಳೆಯಿಂದ ಉಂಟಾದ ಭಾರೀ ಭೂಕುಸಿತದ ನಂತರ ಲಾಚೆನ್ ಮತ್ತು ಲಾಚುಂಗ್ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಒಟ್ಟು 2,413 ಪ್ರವಾಸಿಗರನ್ನು ಉತ್ತರ ಸಿಕ್ಕಿಂನಿಂದ ಶನಿವಾರ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೆಗಾಂಗ್-ಚುಂಗ್‌ಥಾಂಗ್‌ನಲ್ಲಿ ಭೂಕುಸಿತ ರಸ್ತೆ ತಡೆಗೆ ಕಾರಣವಾಯಿತು, ಈ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಚುಂಗ್‌ಥಾಂಗ್ ಉಪವಿಭಾಗದ ಅಧಿಕಾರಿಗಳು, ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್ ಮತ್ತು ಸ್ಥಳೀಯ ಪಂಚಾಯತ್ ಸದಸ್ಯರು ಜಂಟಿಯಾಗಿ ನಡೆಸಿದ ಒಂದು ದಿನದ ರಕ್ಷಣಾ ಕಾರ್ಯಾಚರಣೆಯಲ್ಲಿ, ಸಿಲುಕಿಕೊಂಡಿದ್ದ 2,413 ಪ್ರವಾಸಿಗರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಶುಕ್ರವಾರ ಮುಂಜಾನೆ ಭೂಕುಸಿತ ಸಂಭವಿಸಿದ್ದು, ಪೆಗಾಂಗ್-ಚುಂಗ್‌ಥಾಂಗ್ ಪ್ರದೇಶಗಳ ನಿವಾಸಿಗಳು ಮತ್ತು ಪ್ರವಾಸಿಗರು ಸಿಲುಕಿಕೊಂಡಿದ್ದರು. ಎಲ್ಲಾ ಪ್ರವಾಸಿಗರನ್ನು ರಾಜ್ಯ ಸರ್ಕಾರವು ವ್ಯವಸ್ಥೆಗೊಳಿಸಿದ ವಾಹನಗಳಲ್ಲಿ ಸಿಕ್ಕಿಂ ರಾಜಧಾನಿ ಗ್ಯಾಂಗ್‌ಟಾಕ್‌ಗೆ ಕರೆದೊಯ್ಯಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.