Mysore
19
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಈತ 3 ಸ್ವರೂಪಗಳಲ್ಲಿ ಆಡಬೇಕು: ಯುವ ಆಟಗಾರನ ಬಗ್ಗೆ ಗೌತಮ್ ಗಂಭೀರ್ ಮೆಚ್ಚುಗೆ!

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಲಂಡನ್ ನ ದಿ ಓವಲ್ ಮೈದಾನದಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡ ಬೆನ್ನಲ್ಲೇ ಯುವ ಆಟಗಾರರಿಗೆ ಮಣೆ ಹಾಕಿರುವ ಬಿಸಿಸಿಐ ತಂಡವನ್ನು ಬಲಿಷ್ಠಗೊಳಿಸಿ ಆ ಮೂಲಕ ಟ್ರೋಫಿ ಗೆಲ್ಲಲು ರಣತಂತ್ರ ರೂಪಿಸಿದೆ. ಈ ನಡುವೆ ವಿಶ್ವಕಪ್ ವಿಜೇತ ಆಟಗಾರ ಗೌತಮ್ ಗಂಭೀರ್, ರಾಜಸ್ಥಾನ್ ರಾಯಲ್ಸ್ ನ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಪರ ಬ್ಯಾಟಿಂಗ್ ನಡೆಸಿದ್ದು, ಯುವ ಆಟಗಾರನಿಗೆ 3 ಸ್ವರೂಪದಲ್ಲೂ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ನ್ಯೂಸ್ 18 ಜೊತೆ ಮಾತನಾಡಿರುವ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್, ಯುವ ಎಡಗೈ ಆಟಗಾರ ದೇಶಿ ಕ್ರಿಕೆಟ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದು ಟೀಮ್ ಇಂಡಿಯಾದ 3 ಸ್ವರೂಪರ ಕ್ರಿಕೆಟ್ ನಲ್ಲಿ ಸ್ಥಾನ ನೀಡಬೇಕು ಎಂದು ಬಯಸಿದ್ದಾರೆ.

“ಯಶಸ್ವಿ ಜೈಸ್ವಾಲ್ ಅವರು ಐಪಿಎಲ್ ನಲ್ಲಿ ಮಾತ್ರ ಮಿಂಚು ಹರಿಸಿಲ್ಲ. ದೇಶಿಯ ಕ್ರಿಕೆಟ್ ನಲ್ಲೂ ಸ್ಫೋಟಕ ಬ್ಯಾಟ್ ಮಾಡಿ ದ್ವಿಶತಕ, ತ್ರಿಶಕ ಬಾರಿಸಿ ಗಮನ ಸೆಳೆದಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ 200 ರನ್ ಸಿಡಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಐಪಿಎಲ್ ಟೂರ್ನಿಯಲ್ಲಿ ಏನು ಪ್ರದರ್ಶನ ತೋರಿದ್ದಾರೋ ಅದು ಸಿಹಿಯಾದ ಕೇಕ್ ಮೇಲೆ ಚೆಲ್ಲಿರುವ ಐಸ್ ಕ್ರೀಮ್ ರೀತಿ ಇದೆ. ಆದ್ದರಿಂದ ಯುವ ಪ್ರತಿಭೆಗೆ ಭಾರತ ತಂಡದಲ್ಲಿ 3 ಸ್ವರೂಪದಲ್ಲೂ ಅವಕಾಶ ಕಲ್ಪಿಸಬೇಕು” ಎಂದು ಗೌತಮ್ ಗಂಭೀರ್ ಶ್ಲಾಘಿಸಿದ್ದಾರೆ.

Yashasvi Jaiswal: Winning shot was a great feeling as I wanted to finish  the game: Yashasvi Jaiswal | Cricket News - Times of India

ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶ ಎ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಎ ಪರ ಕಾಣಿಸಿಕೊಂಡಿದ್ದ ಯಶಸ್ವಿ ಜೈಸ್ವಾಲ್ ಆಕರ್ಷಕ ಶತಕ ಸಿಡಿಸಿದ್ದಾರೆ. ಅಲ್ಲದೆ ರಣಜಿ ಟೂರ್ನಿಯಲ್ಲಿ ಅತ್ಯಮೋಘ 315 ರನ್ ಬಾರಿಸಿದ್ದು, ಇರಾನಿ ಟ್ರೋಫಿಯಲ್ಲೂ ಶತಕ ಸಂಭ್ರಮ ಕಂಡಿದ್ದಾರೆ.

2023ನೇ ಸಾಲಿನ ಐಪಿಎಲ್ ಟೂರ್ನಿಯಲ್ಲೂ ರನ್ ಹೊಳೆ ಹರಿಸಿರುವ ಯಶಸ್ವಿ ಜೈಸ್ವಾಲ್, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 13 ಎಸೆತಗಳಲ್ಲೇ ವೇಗದ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದಾರೆ. 163.61 ಸರಾಸರಿಯಲ್ಲಿ 14 ಪಂದ್ಯಗಳಿಂದ 625 ಬಾರಿಸಿದ್ದಾರೆ.

21 ವರ್ಷದ ಯುವ ಆಟಗಾರ 15 ಪ್ರಥಮ ದರ್ಜೆ ಪಂದ್ಯಗಳಿಂದ 80.21 ಸರಾಸರಿಯಲ್ಲಿ 1845 ರನ್ ಬಾರಿಸಿದ್ದರೆ, 32 ಲೀಸ್ಟ್ ಎ ಪಂದ್ಯಗಳಿಂದ 53.96 ಸರಾಸರಿಯಲ್ಲಿ 1511 ರನ್ ಚಚ್ಚಿದ್ದಾರೆ. ರೆಡ್ ಬಾಲ್ ಸ್ವರೂಪದಲ್ಲಿ 9 ಸೆಂಚುರಿ, ಲೀಸ್ಟ್ ಎ ಪಂದ್ಯಗಳಲ್ಲಿ 5 ಶತಕ ಬಾರಿಸಿರುವ ಯಶಸ್ವಿ ಜೈಸ್ವಾಲ್, ಜುಲೈ 12 ರಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಸರಣಿಯಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಭರವಸೆ ಮೂಡಿಸಿದ್ದಾರೆ. ಭಾರತ ತಂಡವು ಕೆರಿಬಿಯನ್ ನಾಡಿನಲ್ಲಿ 2 ಟೆಸ್ಟ್, 3 ಏಕದಿನ ಮತ್ತು 5 ಟಿ 20 ಪಂದ್ಯಗಳ ಸರಣಿಗಳನ್ನು ಆಡಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ