ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಅಕ್ಟೋಬರ್ ನಲ್ಲಿ ಭಾರತಕ್ಕೆ ಪ್ರಯಾಣಿಸಲಿದೆ ಎಂದು ವರದಿ ಹೇಳಿದೆ. ನವೆಂಬರ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗಾಗಿ ಭಾರತಕ್ಕೆ ಬರಲು ಸಿದ್ದರಾಗಿದ್ದಾರೆ. ಈ ವಿವಾದದ ಪರಿಹಾರದ ನಂತರ, ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಏಷ್ಯಾಕಪ್ 2023 ಟೂರ್ನಿಯ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಇದಲ್ಲದೇ ಶ್ರೀಲಂಕಾದಲ್ಲಿಯೂ ಕೆಲವು ಪಂದ್ಯಗಳು ನಡೆಯಲಿವೆ. ಕಳೆದ ಹಲವು ತಿಂಗಳುಗಳಿಂದ ಟೂರ್ನಿಯ ಆತಿಥ್ಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡುವೆ ನಡೆಯುತ್ತಿದ್ದ ಜಿದ್ದಾಜಿದ್ದಿ ಈಗ ದೂರವಾಗುವ ಲಕ್ಷಣ ಕಾಣುತ್ತಿದೆ.
ಮಾಧ್ಯಮ ವರದಿಗಳ ಪ್ರಕಾರ, ಟೂರ್ನಿಗಾಗಿ PCB ಹೈಬ್ರಿಡ್ ಮಾದರಿ ನಡೆಸಲು ಸಿದ್ಧವಾಗಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಮುಂಬರುವ ಸಭೆಯಲ್ಲಿ ಅನುಮೋದಿಸಲು ನಿರ್ಧರಿಸಲಾಗಿದೆ.
ಇದು ವಿಶ್ವಕಪ್ ಮೇಲೂ ಪರಿಣಾಮ ಬೀರಲಿದ್ದು, ಇದೀಗ ಪಾಕಿಸ್ತಾನ ತಂಡ ವಿಶ್ವಕಪ್ ಗೆ ಭಾರತಕ್ಕೆ ಬರುವ ದಾರಿ ಬಹುತೇಕ ನಿಚ್ಚಳವಾಗಿದೆ. ಜೂನ್ 13 ರಂದು, ಟೂರ್ನಮೆಂಟ್‌ನ ಹೈಬ್ರಿಡ್ ಮಾದರಿಯ ಬಗ್ಗೆ ಕೌನ್ಸಿಲ್ ಅಧಿಕೃತ ಪ್ರಕಟಣೆಯನ್ನು ಮಾಡಲಿದೆ.
ಇದರಲ್ಲಿ ಪಾಕಿಸ್ತಾನದೊಂದಿಗೆ ಶ್ರೀಲಂಕಾ ಸಹ ಏಷ್ಯಾ ಕಪ್ ಅನ್ನು ಔಪಚಾರಿಕವಾಗಿ ಆಯೋಜಿಸಲಾಗುವುದು ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಹೇಳಿದೆ. ಸೆಪ್ಟೆಂಬರ್‌ನಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಪಾಕಿಸ್ತಾನವು ಏಷ್ಯಾಕಪ್‌ನ 4 ಪಂದ್ಯಗಳನ್ನು ತಮ್ಮ ತವರಿನಲ್ಲಿ ನಡೆಸಲು ಪ್ರಸ್ತಾಪಿಸಿತ್ತು, ಅದು ಅನುಮೋದನೆ ಪಡೆಯುವುದು ಖಚಿತವಾಗಿದೆ. ಈ ಪಂದ್ಯಗಳು ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಾಕಿಸ್ತಾನ-ನೇಪಾಳ, ಅಫ್ಘಾನಿಸ್ತಾನ-ಶ್ರೀಲಂಕಾ, ಬಾಂಗ್ಲಾದೇಶ-ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ-ಬಾಂಗ್ಲಾದೇಶದ ಪಂದ್ಯಗಳು ನಡೆಯಲಿವೆ. ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ. ಇದರಲ್ಲಿ ಟೀಂ ಇಂಡಿಯಾದ ಎಲ್ಲಾ ಪಂದ್ಯಗಳೂ ಸೇರಿವೆ. ಇದಲ್ಲದೇ ಫೈನಲ್ ಪಂದ್ಯವೂ ಶ್ರೀಲಂಕಾದಲ್ಲಿ ಮಾತ್ರ ನಡೆಯಲಿದೆ.
ಪಿಸಿಬಿ ಮತ್ತು ಬಿಸಿಸಿಐ ನಡುವಿನ ಜಗಳ ಅಂತ್ಯಗೊಳ್ಳುತ್ತಿದ್ದಂತೆ ಐಸಿಸಿ ಕೂಡ ನೆಮ್ಮದಿಯ ನಿಟ್ಟುಸಿರು ಬಿಡಲಿದೆ. ಏಷ್ಯಾಕಪ್‌ಗೆ ಪಾಕಿಸ್ತಾನ ನೀಡಿರುವ ಹೈಬ್ರಿಡ್ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ, ಏಕದಿನ ವಿಶ್ವಕಪ್‌ಗೆ ಸಂಬಂಧಿಸಿದಂತೆ ಯಾವುದೇ ಅಡೆತಡೆ ಆಗುವುದಿಲ್ಲ.
ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಅಕ್ಟೋಬರ್‌ನಲ್ಲಿ ಭಾರತಕ್ಕೆ ಪ್ರಯಾಣಿಸಲಿದೆ ಎಂದು ವರದಿ ಹೇಳಿದೆ. ನವೆಂಬರ್‌ನಲ್ಲಿ ನಡೆಯಲಿರುವ ಪಂದ್ಯಾವಳಿಗಾಗಿ ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ. ಈ ವಿವಾದದ ಪರಿಹಾರದ ನಂತರ, ವಿಶ್ವಕಪ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.