Mysore
22
few clouds

Social Media

ಶನಿವಾರ, 03 ಅಕ್ಟೋಬರ್ 2026
Light
Dark

ಬಿಜೆಪಿ ಪ್ರಕಾರ ನ್ಯಾಯ ಕೇಳುವುದು ಹಾಗೂ ಪ್ರಶ್ನಿಸುವುದು ದೇಶದ್ರೋಹವೇ : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು : ನ್ಯಾಯಕೇಳುವುದು ಹಾಗೂ ಪ್ರಶ್ನಿಸುವುದು ದೇಶದ್ರೋಹವಾಗಿ ಬದಲಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕೃಷಿ ಕಾಯ್ದೆ ವಿರುದ್ಧ ಪ್ರತಿಭಟಿಸಿದವರು ದೇಶದ್ರೋಹಿಗಳು, ಸಿಎಎ-ಎನ್‍ಆರ್ ಸಿ ವಿರುದ್ಧ ಪ್ರತಿಭಟಿಸಿದವರು ದೇಶದ್ರೋಹಿಗಳು, ಅತ್ಯಾಚಾರಿಯ ವಿರುದ್ಧ ನ್ಯಾಯ ಕೇಳುವ ಕ್ರೀಡಾಪಟುಗಳು ದೇಶದ್ರೋಹಿಗಳು. ಇದು ಬಿಜೆಪಿಯ ವರಸೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ಪ್ರಕಾರ ನ್ಯಾಯ ಕೇಳುವುದು ಹಾಗೂ ಪ್ರಶ್ನಿಸುವುದು ದೇಶದ್ರೋಹವಾಗಿ ಬದಲಾಗಿದೆಯೆ. ಪ್ರಜಾಪ್ರಭುತದಲ್ಲಿ ಪ್ರಜೆ ಕಳೆದುಹೋಗಿ ಬರೀ ಪ್ರಭುತ್ವ ಉಳಿದಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಕಲ್ಲು, ಮಣ್ಣಿನ ಕಟ್ಟಡವಲ್ಲ. ಆಡಳಿತಗಾರನ ಧೋರಣೆಯಲ್ಲಿ, ನಡವಳಿಕೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಅಡಕವಾಗಿರುತ್ತವೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!