Mysore
24
overcast clouds

Social Media

ಭಾನುವಾರ, 14 ಜೂನ್ 2026
Light
Dark

ಅಕ್ರಮ ಹಣ ವರ್ಗಾವಣೆ ಆರೋಪ: ತಮಿಳಿನ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಮೇಲೆ ಇ.ಡಿ ದಾಳಿ

ಚೆನ್ನೈ: ತಮಿಳಿನ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ʼಲೈಕಾ ಪ್ರೊಡಕ್ಷನ್ಸ್ʼ ಸಂಸ್ಥೆಗೆ ಸೇರಿದ ವಿವಿಧ ಸ್ಥಳಕ್ಕೆ ಇ.ಡಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಹೌಸ್ ಸಂಸ್ಥೆ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿಈ ದಾಳಿಯನ್ನು ನಡೆಸಲಾಗಿದೆ ಎಂದು ವರದಿಯಾಗಿದೆ.

ಸಿನಿಮಾ ನಿರ್ಮಾಣ ಸಂಸ್ಥೆಗೆ ಸೇರಿದ ಚೆನ್ನೈನ 8 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ಅಧಕಾರಿಗಳು ದಾಳಿ ನಡೆಸಿದ್ದಾರೆ. ಸದ್ಯ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ಹಲವು ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ದಾಳಿಯ ಬಗ್ಗೆ ಲೈಕಾ ಪ್ರೊಡಕ್ಷನ್ಸ್ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ತಮಿಳು ಸಿನಿಮಾರಂಗದಲ್ಲಿ ಬಹುದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ʼಲೈಕಾ ಪ್ರೊಡಕ್ಷನ್ಸ್ʼ ಬಹುಕೋಟಿ ನಿರ್ಮಾಣದ ರಜಿನಿಕಾಂತ್‌ ಅವರ ʼ2.0ʼ, ‘ದರ್ಬಾರ್’ ಸಿನಿಮಾಕ್ಕೆ ಬಂಡವಾಳ ಹಾಕಿದೆ. ಹಿಂದಿಯಲ್ಲಿ ಜಾಹ್ನವಿ ಕಪೂರ್‌ ಅವರ ʼ ಗುಡ್ ಲಕ್ ಜೆರ್ರಿʼ ಅಕ್ಷಯ್‌ ಕುಮಾರ್‌ ಅವರ ʼರಾಮ್‌ ಸೇತುʼ ಸಿನಿಮಾವನ್ನು ನಿರ್ಮಾಣ ಮಾಡಿದೆ.

ಇತ್ತೀಚೆಗೆ ಬಂದ ಮಣಿರತ್ನಂ ಅವರ ʼ ಪೊನ್ನಿಯಿನ್ ಸೆಲ್ವನ್ʼ 1,2ʼ ಸಿನಿಮಾವನ್ನು ನಿರ್ಮಾಣ ಮಾಡಿದೆ. ಸದ್ಯ ರಜಿನಿಕಾಂತ್‌ ಪುತ್ರಿ ‘ಲಾಲ್ ಸಲಾಂʼ ಸಿನಿಮಾಕ್ಕೆ ಬಂಡವಾಳ ಹಾಕಿದೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!