ಮೈಸೂರು : ಭಾರೀ ಕುತೂಹಲ ಕೆರಳಿಸಿದ್ದ ವರುಣಾ (ಕ್ಷೇತ್ರ ಸಂಖ್ಯೆ 219) ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಂಚೆ ಮತಗಳಲ್ಲಿ ಮುನ್ನಡೆ ಕಾಯ್ದಕೊಂಡಿದ್ದು, ಇಲ್ಲಿ ಬಿಜೆಪಿಯ ಅಭ್ಯರ್ಥಿ ಸಚಿವ ವಿ. ಸೋಮಣ್ಣ ಹಿನ್ನಡೆ ಅನುಭವಿಸುತ್ತಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಮೈಸೂರಿನ ವರುಣಾ ಕ್ಷೇತ್ರ ರಾಜ್ಯದ ಗಮನವನ್ನು ಸೆಳೆದಿತ್ತು. ಪ್ರಭಾವಿ ನಾಯಕ ವಿ. ಸೋಮಣ್ಣ ಅವರನ್ನು ಬಿಜೆಪಿ ಇಲ್ಲಿಂದ ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಈ ಕ್ಷೇತ್ರ ಮತ್ತಷ್ಟು ಕುತೂಹಲ ಹುಟ್ಟಿಸಿತ್ತು.
ಈ ಬಾರಿ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಎಸ್‌ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಎಂ ಕೂಡ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1,17155 ಪುರುಷ ಮತದಾರರು, 1,17,365 ಮಹಿಳೆಯರು, 13 ಇತರ ಮತದಾರರು ಸೇರಿ ಒಟ್ಟು 2,34,533 ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ. ಮೇ 10ರಂದು ನಡೆದಿದ್ದ ಮತದಾನದ ವೇಳೆ ಇವರಲ್ಲಿ ಶೇ.84.74ರಷ್ಟು ಮತದಾರರು ಮತ ಚಲಾಯಿಸುವ ಮೂಲಕ ಭಾರೀ ಮತದಾನ ನಡೆದಿತ್ತು.
1 ಕೃಷ್ಣಮೂರ್ತಿ ಎಂ. – ಬಿಎಸ್‌ಪಿ- ಹಿನ್ನಡೆ
2 ಡಾ. ಭಾರತಿ ಶಂಕರ್ ಎನ್‌ಎಲ್ – ಜೆಡಿಎಸ್- ಹಿನ್ನಡೆ
3 ರಾಜೇಶ್ -ಎಎಪಿ -ಹಿನ್ನಡೆ
4 ಸಿದ್ದರಾಮಯ್ಯ- ಕಾಂಗ್ರೆಸ್ -ಮುನ್ನಡೆ
5 ವಿ ಸೋಮಣ್ಣ- ಬಿಜೆಪಿ- ಹಿನ್ನಡೆ
6 ಅರುಣ್ ಲಿಂಗ- ಕನ್ನಡ ಚಕ್ರವರ್ತಿ ಕನ್ನಡ ದೇಶದ ಪಕ್ಷ- ಹಿನ್ನಡೆ
7 ಎನ್ ಅಂಬರೀಶ್ ಕದಂಬ ನಾ ಅಂಬರೀಶ್- ಕೆಜೆಪಿ- ಹಿನ್ನಡೆ
8 ಕೆ. ನಾಗೇಶ ನಾಯ್ಕ- ಸಮಾಜವಾದಿ ಜನತಾ ಪಾರ್ಟಿ- ಹಿನ್ನಡೆ
9 ಮಹದೇವಸ್ವಾಮಿ ಆರ್- ಪ್ರಜಾಕೀಯ -ಹಿನ್ನಡೆ
10 ರವಿಕುಮಾರ್ ಎಂ- ಕೆಆರ್‌ಎಸ್- ಹಿನ್ನಡೆ
11 ಶಿವ ಇ- ಕರ್ನಾಟಕ ಪ್ರಜಾ ಪಾರ್ಟಿ- ಹಿನ್ನಡೆ
12 ಚೇತನ್ ಇ -ಪಕ್ಷೇತರ -ಹಿನ್ನಡೆ
13 ಪ್ಯಾರಿಜಾನ್- ಪಕ್ಷೇತರ -ಹಿನ್ನಡೆ
14 ಎಂ ಮಹೇಶ್- ಪಕ್ಷೇತರ- ಹಿನ್ನಡೆ
15 ಡಾ.ಯು.ಪಿ. ಶಿವಾನಂದ- ಪಕ್ಷೇತರ- ಹಿನ್ನಡೆ
2018ರಲ್ಲಿ ಇಲ್ಲಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದರು. ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅವರು 96,435 ಮತಗಳನ್ನು ಪಡೆದು ಬಿಜೆಪಿಯ ಟಿ. ಬಸವರಾಜು ವಿರುದ್ಧ 58,616 ಮತಗಳ ಅಂತರದ ಭರ್ಜರಿ ಜಯ ಸಾಧಿಸಿದ್ದರು. ಬಸವರಾಜು ಕೇವಲ 37,819 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದರು.