Mysore
21
overcast clouds

Social Media

ಸೋಮವಾರ, 24 ಆಗಸ್ಟ್ 2026
Light
Dark

ಡಿಕೆಶಿ ಗಡ್ಡ ಬಿಟ್ಟಿರುವ ಪ್ರಶ್ನೆಗೆ 13ಕ್ಕೆ ಉತ್ತರ : ಅಣ್ಣನ ಸಂಕಷ್ಟಕ್ಕೆ ಕಣ್ಣೀರು ಹಾಕಿದ ಸುರೇಶ್​

ರಾಮನಗರ : ಅಣ್ಣ ಡಿ.ಕೆ.ಶಿವಕುಮಾರ್​ ಕಷ್ಟವನ್ನು ನೆನೆದು ಸಹೋದರ ಡಿ.ಕೆ.ಸುರೇಶ್​ ಕಣ್ಣೀರು ಹಾಕಿದ ಘಟನೆ ಕನಕಪುರದ ದೊಡ್ಡಾಲಹಳ್ಳಿಯಲ್ಲಿ ನಡೆದಿದೆ. ಸ್ವಗ್ರಾಮ ದೊಡ್ಡಾಲಹಳ್ಳಿಯಲ್ಲಿ ಪ್ರಚಾರ ನಡೆಸುವಾಗ ಸಹೋದರ ಪಡುತ್ತಿರುವ ಕಷ್ಟ ನೆನೆದು ಕಣ್ಣೀರು ಹಾಕಿದರು.

ಕಳೆದ ಎರಡೂವರೆ ವರ್ಷಗಳಿಂದಲೂ ಡಿ.ಕೆ.ಶಿವಕುಮಾರ್​ ಸರಿಯಾಗಿ ಊಟ, ನಿದ್ದೆ ಮಾಡಿಲ್ಲ. ಇಂತಹ ಕಷ್ಟದಲ್ಲಿ ಅವರು ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದರು.
ಡಿಕೆಶಿ ಗಡ್ಡ ಏಕೆ ಬಿಟ್ಡಿದ್ದಾರೆ ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ಕೊಡಬೇಕಾಗಿರುವುದು ಕ್ಷೇತ್ರದ ಜನತೆ. ಈಗ ಅದಕ್ಕೆ ಉತ್ತರ ಕೊಡುವ ಕಾಲ ಬಂದಿದ್ದು, ಮೇ13 ರಂದು ಇದಕ್ಕೆ ಉತ್ತರ ಸಿಗಲಿದೆ ಎಂದು ಸುರೇಶ್​ ಹೇಳಿದರು.

ಎಲ್ಲರೂ ಡಿ.ಕೆ.ಶಿವಕುಮಾರ್​ ಅವರಿಗೆ ಮತ ಹಾಕಬೇಕು ಮತ್ತು ಹಾಕಿಸಬೇಕು. ಈ ಮೂಲಕ ರಾಜ್ಯದ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು. ರಾಜ್ಯದ ಅಭಿವೃದ್ಧಿ ಜತೆಗೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!